Wednesday, June 24, 2026
Homeಅಪರಾಧಮಂಗಳೂರಿನ ನಗರ ಕಾರಾಗೃಹದಲ್ಲಿ ದಿಢೀರ್‌ ತಪಾಸಣೆ: 2 ಮೊಬೈಲ್‌ ಸಮೇತ ಕೆಲವು ವಸ್ತುಗಳು ಪತ್ತೆ

ಮಂಗಳೂರಿನ ನಗರ ಕಾರಾಗೃಹದಲ್ಲಿ ದಿಢೀರ್‌ ತಪಾಸಣೆ: 2 ಮೊಬೈಲ್‌ ಸಮೇತ ಕೆಲವು ವಸ್ತುಗಳು ಪತ್ತೆ

- Advertisement -
- Advertisement -

ಮಂಗಳೂರು: ನಗರ ಕಾರಾಗೃಹದ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ತಡರಾತ್ರಿ ದಿಢೀರ್ ತಪಾಸಣೆ ನಡೆಸಿದ್ದಾರೆ.

ತಪಾಸಣೆ ಸಂದರ್ಭದಲ್ಲಿ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವ 2 ಮೊಬೈಲ್‌ಗಳು, 1 ಸಿಮ್ ಕಾರ್ಡ್ ಮತ್ತು 1 ಕೇಬಲ್ ರಹಿತ ಮೊಬೈಲ್ ಚಾರ್ಜ ರ್ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಮಂಗಳೂರು ಬರ್ಕೆ ಪೊಲೀಸ್ ಠಾಣೆಗೆ ಇವುಗಳನ್ನ ನೀಡಿ ಪ್ರಕರಣ ದಾಖಲಿಸಲಾಗಿರುತ್ತದೆ.

ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ ಈ ಬಗ್ಗೆ ಇದೇ ದಿನ ಇಲಾಖೆಯ ಮುಖ್ಯಸ್ಥರಾದ ಮಾನ್ಯ ಅಲೋಕ್ ಕುಮಾರ್ ಐ.ಪಿ.ಎಸ್. ಮಹಾನಿರ್ದೇಶಕರು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಬೆಂಗಳೂರು ಇವರಿಗೆ ದೂರವಾಣಿ ಮುಖಾಂತರ ವಿಷಯವನ್ನು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!