Saturday, June 6, 2026
Homeಕರಾವಳಿಪುತ್ತೂರು; ಸ್ನೇಹಿತೆಯನ್ನು ಭೇಟಿಯಾಗಲು ಬಂದ ವಿದ್ಯಾರ್ಥಿಯ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿಯ ಹೆತ್ತವರು

ಪುತ್ತೂರು; ಸ್ನೇಹಿತೆಯನ್ನು ಭೇಟಿಯಾಗಲು ಬಂದ ವಿದ್ಯಾರ್ಥಿಯ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿಯ ಹೆತ್ತವರು

- Advertisement -
- Advertisement -

ಪುತ್ತೂರು; ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದ ಕಾಲೇಜೊಂದರ ವಿದ್ಯಾರ್ಥಿಯ ವಿರುದ್ಧ ವಿದ್ಯಾರ್ಥಿನಿಯ ಹೆತ್ತವರು ಪೊಲೀಸರಿಗೆ ದೂರು ನೀಡಿದ  ಘಟನೆ ಪುತ್ತೂರಿನ ಮುಕ್ವೆ ಸಮೀಪ ನಡೆದಿದೆ.

ಗೆಜ್ಜೆಗಿರಿ ಸಮೀಪದ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವ ತನ್ನ ಸಹಪಾಠಿ ಸ್ನೇಹಿತೆಯನ್ನು ಭೇಟಿಯಾಗಲೆಂದು ಮುಕ್ವೆಗೆ ಬಂದಿದ್ದ. ಆದರೆ ವಿದ್ಯಾರ್ಥಿನಿಯ ಮನೆಯವರಿಗೆ ಗೊಂದಲ ಉಂಟಾಗಿ ವಿದ್ಯಾರ್ಥಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ವಿದ್ಯಾರ್ಥಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!