Tuesday, April 30, 2024
Homeಅಪರಾಧವಿದ್ಯಾರ್ಥಿಯೋರ್ವ 29 ಗಂಟೆಗಳ ಕಾಲ ಚಿತ್ರಹಿಂಸೆಯಿಂದ ನೊಂದು ನೇಣಿಗೆ ಶರಣು

ವಿದ್ಯಾರ್ಥಿಯೋರ್ವ 29 ಗಂಟೆಗಳ ಕಾಲ ಚಿತ್ರಹಿಂಸೆಯಿಂದ ನೊಂದು ನೇಣಿಗೆ ಶರಣು

spot_img
- Advertisement -
- Advertisement -

ವಯನಾಡ್‌: ಕೇರಳದ ವಯನಾಡ್‌ನ‌ ಕಾಲೇಜ್‌ ಹಾಸ್ಟೆಲ್‌ನಲ್ಲಿ ಪಶು ವೈದ್ಯಕೀಯ ಪದವಿ ವಿದ್ಯಾರ್ಥಿಯೋರ್ವ ಫೆ.18 ರಂದು ಅತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಮುಖ್ಯ ಕಾರಣ ಆತನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳಾಗಿದ್ದು, ಇವರು ನಿರಂತರವಾಗಿ 29 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರು ಎಂಬ ಮಾಹಿತಿ ಪೊಲೀಸ್‌ ವರದಿಯಿಂದ ಬಹಿರಂಗವಾಗಿದೆ.

ಘಟನೆಯ ವಿವರ: ಹಾಸ್ಟೆಲ್‌ನ ಶೌಚಾಲಯದಲ್ಲಿ ತಿರುವನಂತಪುರದ ನಿವಾಸಿ, ವಿದ್ಯಾರ್ಥಿ ಸಿದ್ಧಾರ್ಥ ಜೆ.ಎಸ್‌.(20) ಮೃತದೇಹ ಪತ್ತೆಯಾಗಿತ್ತು. ಸಿಪಿಎಂ ವಿದ್ಯಾರ್ಥಿ ಘಟಕವಾದ ಎಸ್‌ಎಫ್ಐ ಕಾರ್ಯಕ ರ್ತರು ಸಿದ್ಧಾರ್ಥಗೆ ರ್ಯಾಗಿಂಗ್‌ ಮಾಡಿ ದ್ದೇ ಆತ್ಮಹತ್ಯೆಗೆ ಕಾರಣ ಎಂದು ಸಿದ್ಧಾರ್ಥ್ ಕುಟುಂಬಸ್ಥರು ಆರೋಪಿಸಿ ದ್ದರು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.

ಕೇರಳ ಪೊಲೀಸರ ವರದಿ ಪ್ರಕಾರ, ಫೆ.16ರ ಬೆಳಗ್ಗೆ 9 ಗಂಟೆಯಿಂದ ಫೆ.17ರ ಮಧ್ಯರಾತ್ರಿ 2 ಗಂಟೆವರೆಗೆ ಸಿದ್ಧಾರ್ಥ್ ನನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳು ಬೆಲ್ಟ್ ಮತ್ತು ಕೈಗಳಿಂದ ನಿರಂತರವಾಗಿ ಹಲ್ಲೆ ನಡೆಸಿ ದ್ದಾರೆ. ಹೀಗಾಗಿ ತೀವ್ರ ಮಾನಸಿಕ ಒತ್ತಡದಿಂದ ಫೆ.18ರಂದು ಮಧ್ಯಾಹ್ನ 1 ಗಂಟೆಗೆ ಹಾಸ್ಟೆಲ್‌ನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!