Wednesday, June 24, 2026
HomeUncategorizedತಂದೆಯ ವರ್ಷದ ಪುಣ್ಯಸ್ಮರಣೆಯಂದು ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪ‌ನಮನ ಸಲ್ಲಿಸಿದ ಮಗ

ತಂದೆಯ ವರ್ಷದ ಪುಣ್ಯಸ್ಮರಣೆಯಂದು ಸಮಾಧಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪ‌ನಮನ ಸಲ್ಲಿಸಿದ ಮಗ

- Advertisement -
- Advertisement -

ಕೋಲಾರ: ತಂದೆಯ ವರ್ಷದ ಪುಣ್ಯಸ್ಮರಣೆಯಂದು ತಂದೆಯ ಸಮಾಧಿಗೆ ಪುತ್ರ ಹೆಲಿಕಾಪ್ಟರ್ ಮೂಲಕ ಪುಷ್ಪ‌ನಮನ ಸಲ್ಲಿಸಿರುವ ಅಪರೂಪದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

ಮುಳಬಾಗಿಲು ತಾಲೂಕಿನ ಕೊತ್ತೂರು ರಾಮಾಪುರ ಗ್ರಾಮದ ಗೋವಿಂದ ರಾಜ್ ಅವರು ಒಂದು ವರ್ಷದ ಹಿಂದೆಯಷ್ಟೇ ಮೃತಪಟ್ಟಿದ್ದರು. ಅವರ ಸಮಾಧಿಗೆ ವರ್ಷದ ಪುಣ್ಯಸ್ಮರಣೆಯಂದು ಪುತ್ರ ಲೊಕೇಶ್  ಹೆಲಿಕಾಪ್ಟರ್ ಮೂಲಕ‌ ಪುಷ್ಪನಮನ ಸಲ್ಲಿಸಿದ್ದಾರೆ.

ಲೋಕೇಶ್ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ತಮ್ಮ ಹುಟ್ಟೂರಿನಲ್ಲಿ ಸುಮಾರು 25 ಲಕ್ಷ ರೂ. ಖರ್ಚು ಮಾಡಿ ಬೃಹತ್ ಸಮಾಧಿ ಕಟ್ಟಿಸಿದ್ದಾರೆ. ಈ ನಡುವೆ ಇಂದು ಒಂದು ವರ್ಷದ ಅಂಗವಾಗಿ ವಿಶೇಷವಾಗಿ ಆಚರಣೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಸಲ್ಲಿಸಿದ್ದೇನೆ ಎಂದರು. ನಮ್ಮ ತಂದೆ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದಕ್ಕೂ ಏನೂ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ನಮನ ಸಲ್ಲಿಸಿದ್ದೇವೆ ಎಂದರು ಲೋಕೇಶ್.

- Advertisement -

Latest News

error: Content is protected !!