Saturday, June 13, 2026
Homeತಾಜಾ ಸುದ್ದಿಮತ್ತಿನ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ಅತ್ಯಾಚಾರ: ತನಿಖೆ ವೇಳೆ ಬೆಚ್ಚಿಬೀಳಿಸುವ ಸತ್ಯ...

ಮತ್ತಿನ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ಅತ್ಯಾಚಾರ: ತನಿಖೆ ವೇಳೆ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

- Advertisement -
- Advertisement -

ಚಿತ್ರದುರ್ಗ: ‌ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿ ಸಾಗಿದೆ. ಆದ್ರೆ ತನಿಖೆಯ ವೇಳೆ ಬಹಿರಂಗಗೊಂಡ ಸತ್ಯ ಬೆಚ್ಚಿ ಬೀಳಿಸುವಂತಿದೆ.

ಮುರುಘಾಶ್ರೀಗಳು ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಕರೆಸಿ, ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮತ್ತು ಬರುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳನ್ನು ಅತ್ಯಾಚಾರಕ್ಕೆ ಬಳಸಿಕೊಂಡಿದ್ದಾರೆ. ಕಚೇರಿ, ಬೆಡ್ ರೂಂ, ಬಾತ್ ರೂಂ ಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ. ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ.

ಅಲ್ಲದೇ ಕೆಲ ವರ್ಷದ ಹಿಂದೆ ಓರ್ವ ಬಾಲಕಿ ರೇಪ್ ಅಂಡ್ ಮರ್ಡರ್ ಸಹ ಆಗಿದ್ದಾಳೆ. ಈ ಬಗ್ಗೆ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆದು, ಆಂಧ್ರಕ್ಕೆ ತೆರಳಿದ್ದ ಪೊಲೀಸ್ ತಂಡ ಹಲವು ಮಾಹಿತಿಗಳನ್ನ ಕಲೆ ಹಾಕಿದೆ. ಮಠದ ಹಾಸ್ಟೆಲ್ ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದ್ದು, ಶ್ರೀಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!