Thursday, June 4, 2026
Homeಕರಾವಳಿಮಂಗಳೂರು: ವಾಟ್ಸಾಪ್ ಸಂದೇಶ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ

ಮಂಗಳೂರು: ವಾಟ್ಸಾಪ್ ಸಂದೇಶ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಮಂಗಳೂರು: ವಾಟ್ಸಾಫ್ ಸಂದೇಶ ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.ಈ ಬಗ್ಗೆ ಉರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರುದಾರರಿಗೆ ಡಿ. 14ರಂದು ಸ್ಟಾಕ್‌ ಕಮ್ಯೂನಿಟಿಗೆ ಸಂಬಂಧಿಸಿದಂತೆ ವಾಟ್ಸಾಪ್‌ ಮೂಲಕ ಸಂದೇಶವೊಂದು ಬಂದಿದೆ. ಅದನ್ನು ನಂಬಿ ಐಪಿಒ ಸ್ಟಾಕ್‌ಗಳಿಗೆ ನೋಂದಾಯಿಸಿ ವಿವಿಧ ಐಪಿಒ ಮೊತ್ತದ ಸ್ಟಾಕ್‌ಗಳನ್ನು ಖರೀದಿಸಿ ಲಕ್ಷಾಂತರ ರೂ. ಮೊತ್ತವನ್ನು ಜಮೆ ಮಾಡಿದ್ದರು. ಅಂತಿಮವಾಗಿ ಇದು ಮೋಸದ ಜಾಲ ಎಂದು ತಿಳಿಯುವಷ್ಟರಲ್ಲಿ 13,09,245 ರೂಪಾಯಿಯನ್ನು ದೂರುದಾರರು ಕಳೆದುಕೊಂಡಿದ್ದರು. ಇದೀಗ ಈ ಮೊತ್ತವನ್ನು ವಾಪಸು ಕೊಡಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!