Thursday, June 4, 2026
Homeಕರಾವಳಿಪುನೀತ್‌ ಸಾವಿನ ಸುದ್ದಿ ಕೇಳಿ ಕಾರ್ಕಳದ ವ್ಯಕ್ತಿ ನಾಪತ್ತೆ !!!

ಪುನೀತ್‌ ಸಾವಿನ ಸುದ್ದಿ ಕೇಳಿ ಕಾರ್ಕಳದ ವ್ಯಕ್ತಿ ನಾಪತ್ತೆ !!!

- Advertisement -
- Advertisement -

ಕಾರ್ಕಳ : ವ್ಯಕ್ತಿಯೋರ್ವರು ಪುನೀತ್‌ ರಾಜ್‌ಕುಮಾರ ಅವರ ಸಾವಿನ ಸುದ್ದಿ ಕೇಳಿ ಮನೆ ಬಿಟ್ಟು ಹೋಗಿರುವ ಘಟನೆ ಅ.29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಗೊಮ್ಮಟಬೆಟ್ಟದ ಬಳಿಯ ದಾನಶಾಲೆಯ ನಿವಾಸಿ ದಿನೇಶ್‌ (56) ಎಂಬವರು ನಾಪತ್ತೆಯಾಗಿರುವುದು ಎಂದು ತಿಳಿದುಬಂದಿದೆ.

ಅವರ ಪತ್ನಿ ಸುಮಾ ಅವರು, ತಮ್ಮ ಪತಿ ಸ್ಥಳೀಯ ಲಾಡ್ಜೊಂದರಲ್ಲಿ ಸೂಪರ್‌ ವೈಸರ್‌ ಆಗಿದ್ದು, 29ರಂದು ಮಧ್ಯಾಹ್ನ ಮನೆಗೆ ಬಂದು 1.30 ಗಂಟೆಗೆ ಟಿವಿ ನೋಡುತ್ತಿದ್ದರು. ಆಗ ಪುನಿತ್‌ ರಾಜ್‌ಕುಮಾರ್‌ ಮೃತಪಟ್ಟಸುದ್ದಿ ಪ್ರಸಾರವಾಗುತ್ತಿದ್ದು, ಅದನ್ನು ನೋಡಿ ಎದ್ದು ಹೊರಗೆ ಹೋಗಿದ್ದರು. ಅವರು ಕೆಲಸಕ್ಕೆ ಹೋಗಿರಬಹುದೆಂದು ನಾವು ಭಾವಿಸಿದ್ದೆವು.ಆದರೆ ಅವರು ಈವರೆಗೆ ವಾಪಾಸು ಬಂದಿಲ್ಲ ಎಂದು ದೂರು ನೀಡಿದ್ದು, ಅದರಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದುಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!