ಮಂಗಳೂರು: ಮುಸ್ಲಿಂ ಯುವಕನೋರ್ವ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಮೈಸೂರು ಮೂಲದ ಯುವತಿಗೆ ವಂಚನೆ ಮಾಡಿರುವ ಕುರಿತು ಮಂಗಳೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಣಾಜೆಯ ಮುಡಿಪು ಪರಿಸರದ ಮೊಹಮ್ಮದ್ ಅಜಿನ್ ಎಂಬಾತ ತಾನು ಹಿಂದೂ ಎಂದು ಹೇಳಿಕೊಂಡು ಮದುವೆಯಾಗುವ ಭರವಸೆ ನೀಡಿ ಯುವತಿಯೊಬ್ಬರನ್ನು ಹಲವು ಬಾರಿ ದೈಹಿಕ ಸಂಪರ್ಕಕ್ಕೆ ಬಳಸಿಕೊಂಡು, 35 ಲಕ್ಷ ಹಣ ಪಡೆದು ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆ, ನಂಜನಗೂಡು ಮೂಲದ ಯುವತಿಯೊಬ್ಬರಿಗೆ ಮೊಹಮ್ಮದ್ ಅಜಿನ್ ಎಂಬಾತ ಮೈಸೂರಿನಲ್ಲಿ ಪರಿಚಯವಾಗಿದ್ದು, ನಂತರ ತಾನು ಹಿಂದೂ ಧರ್ಮದ ವ್ಯಕ್ತಿಯೆಂದು ನಂಬಿಸಿದ್ದ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿದಾತ ಆ ಯುವತಿಯನ್ನು ಊಟಿಗೆ ಕರೆದೊಯ್ದು, ದೈಹಿಕ ಸಂಪರ್ಕ ನಡೆಸಿದ್ದ. ಅಲ್ಲದೇ ಆ ಯುವತಿಯ ಅರೆ ನಗ್ನ ಫೋಟೋಗಳನ್ನು ತೆಗೆದಿದ್ದ ಎಂದು ಹೇಳಲಾಗಿದೆ.
ತದನಂತರದಲ್ಲಿ ತನ್ನ ಅಸಲಿ ಮುಖವನ್ನು ತೋರಿಸಿದ ಮೊಹಮ್ಮದ್ ಅಜಿನ್ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 35 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದ. ಮೈಸೂರಿನ ಕೆ.ಆರ್ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲಿಕನ ಮನೆಯಲ್ಲಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದ, ಬಳಲಿದ ಯುವತಿಯನ್ನು ರೋಜಾ ಎಂಬವರು ಬಚಾವ್ ಮಾಡಿದ್ದರು ಎನ್ನಲಾಗಿದೆ. ಅಷ್ಟಕ್ಕೇ ಸುಮ್ಮನಾಗದ ನೀಚ ಬುದ್ಧಿಯ ಆರೋಪಿ ಅಜಿನ್ ಸಂತ್ರಸ್ತ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಲಾಗಿದೆ.
ಇಷ್ಟಾಗಿ ಆತ ನಾಪತ್ತೆಯಾದ ಬಳಿಕ ಸೆ. 21 ರಂದು ಕೊಣಾಜೆ ಮುಡಿಪುವಿನಲ್ಲಿರುವ ಆತನ ಮನೆಗೆ ಬೆಳಿಗ್ಗೆ 11-00 ಗಂಟೆಗೆ ಈ ಯುವತಿ ಹೋಗಿದ್ದು, ಆತನ ಅಮ್ಮ, ಚಿಕ್ಕಮ್ಮ, ಆತನ ಅಪ್ಪ, ತಂಗಿ, ಅಕ್ಕರವರು ಜೊತೆಯಾಗಿ ಸಂತ್ರಸ್ತ ಯುವತಿಯ ಮೇಲೆ ಹಲ್ಲೆಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ.ಈ ವೇಳೆ ಕೋಣಾಜೆ ಪೋಲಿಸ್ ಠಾಣೆಗೆ ತೆರಳಿದ ಯುವತಿ, ಅಲ್ಲಿ ತನ್ನ ದೂರು ತೆಗೆದುಕೊಳ್ಳದ ಕಾರಣ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸದ್ಯ ಆರೋಪಿಯ ವಿರುದ್ಧ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯಲ್ಲಿ Cr.no :69/2021 ಅನ್ವಯ ಸೆಕ್ಷನ್ 376,384,504,506, 417 r/w 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.