Monday, May 20, 2024
Homeಕರಾವಳಿಉಡುಪಿಮಂಗಳೂರು: ಬಸ್‌ಗಳ ಮೂಲಕ ರವಾನೆಯಾಗುವ ಕೊರಿಯರ್‌ ಮತ್ತು ಪಾರ್ಸೆಲ್‌ಗ‌ಳ ಮೇಲೆ ಹೆಚ್ಚಿದ ನಿಗಾ; ಮಾದಕ ವಸ್ತು...

ಮಂಗಳೂರು: ಬಸ್‌ಗಳ ಮೂಲಕ ರವಾನೆಯಾಗುವ ಕೊರಿಯರ್‌ ಮತ್ತು ಪಾರ್ಸೆಲ್‌ಗ‌ಳ ಮೇಲೆ ಹೆಚ್ಚಿದ ನಿಗಾ; ಮಾದಕ ವಸ್ತು ರವಾನೆ ಕುರಿತು ಸಂಶಯ!

spot_img
- Advertisement -
- Advertisement -

ಮಂಗಳೂರು: ಡ್ರಗ್ಸ್‌ ಪೆಡ್ಲರ್‌ಗಳು ಇದೀಗ ಕೆಎಸ್ಆರ್ ಟಿಸಿ ಮೂಲಕ ಡ್ರಗ್ಸ್ ಸಪ್ಲೈ ಮಾಡುವ ಕುರಿತ ಸಂಶಯ ಹೆಚ್ಚಾಗಿದ್ದು, ಬಸ್‌ಗಳ ಮೂಲಕ ರವಾನೆಯಾಗುವ ಕೊರಿಯರ್‌ ಮತ್ತು ಪಾರ್ಸೆಲ್‌ಗ‌ಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಗ್ರಾಮೀಣ ಭಾಗದಲ್ಲಿ ಪಾರ್ಸೆಲ್‌ಗ‌ಳ ರವಾನೆಗೆ ಜನರು ಕೆಎಸ್ಆರ್ ಟಿಸಿ ಅಥವಾ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಸುಲಭವಾಗಿ ಹಾಗೂ ವೇಗವಾಗಿ ಯಾವುದೇ ತನಿಖೆಗಳಿಗಳಿಲ್ಲದೆ ಗುರಿ ತಲುಪುವ ಏಕೈಕ ಮಾರ್ಗವೆಂದರೆ ಅದು ಕೆಎಸ್ಆರ್ ಟಿಸಿ. ಇದೀಗ ಡ್ರಗ್ಸ್‌ ಪೆಡ್ಲರ್‌ಗಳು ಕೂಡ ಇದೆ ದಾರಿಯನ್ನು ಕಂಡುಕೊಂಡಿದ್ದಾರೆ ಎಂಬುದರ ಬಗ್ಗೆ ಸಂಶಯ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೆಎಸ್ಸಾರ್ಟಿಸಿ ಮುಖ್ಯ ಕಚೇರಿಯಿಂದ ಎಲ್ಲ ವಿಭಾಗಗಳಿಗೂ ನಿಗಾ ವಹಿಸಲು ಸೂಚಿಸಲಾಗಿದ್ದು, ಪ್ರಯಾಣಿಕರ ಪಾರ್ಸೆಲ್‌ ಮೇಲೂ ಕಣ್ಣಿಡಲು ಟಿಕೆಟ್‌ ಪರೀಕ್ಷಕರಿಗೂ ಸೂಚಿಸಲಾಗಿದೆ.

ಕಳೆದ ತಿಂಗಳು ಸರಕಾರಿ ಬಸ್‌ಗಳನ್ನು ಗಾಂಜಾ ಸಾಗಣೆಗೆ ಬಳಸಿಕೊಳ್ಳುತ್ತಿದ್ದ ಇಬ್ಬರು ಸಿಬಂದಿಯನ್ನು ಬಿಎಂಟಿಸಿ ಅಮಾನತುಗೊಳಿಸಿತ್ತು. ಬಿಎಂಟಿಸಿ ಕಿರಿಯ ಸಹಾಯಕ ಚಾಲಕ ಕಂ ನಿರ್ವಾಹಕರೊಬ್ಬರು ಲಗೇಜುಗಳ ರೂಪದಲ್ಲಿ ಗಾಂಜಾವನ್ನು ವಿಜಯಪುರ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಸಾಗಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಇನ್ನು ಇದೆ ರೀತಿಯಾಗಿ ಕೆಲವು ತಿಂಗಳ ಹಿಂದೆ ಕೇರಳದಿಂದ ಖಾಸಗಿ ಬಸ್‌ನಲ್ಲಿ ಗಾಂಜಾ ಹಾಗೂ ಹ್ಯಾಷ್‌ ಆಯಿಲ್‌ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ .

ಗಾಂಜಾ ಸಾಗಣೆಗೆ ಕಳೆದ ತಿಂಗಳು ಸರಕಾರಿ ಬಸ್‌ಗಳನ್ನು ಸ್ವತಃ ಇಬ್ಬರು ಸಿಬಂದಿ ಬಳಸಿಕೊಳ್ಳುತ್ತಿದ್ದ ಅಂಶ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಿರಿಯ ಸಹಾಯಕ ಚಾಲಕ ಕಂ ನಿರ್ವಾಹಕರೊಬ್ಬರು ಲಗೇಜುಗಳ ರೂಪದಲ್ಲಿ ಗಾಂಜಾವನ್ನು ವಿಜಯಪುರ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಸಾಗಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಕೂಡಲೇ ಇವರನ್ನು ಬಿಎಂಟಿಸಿ ಅಮಾನತುಗೊಳಿಸಿತ್ತು. ಅದೇ ರೀತಿ, ಕಳೆದ ಕೆಲವು ತಿಂಗಳ ಹಿಂದೆ ಕೇರಳದಿಂದ ಖಾಸಗಿ ಬಸ್‌ನಲ್ಲಿ ಗಾಂಜಾ ಹಾಗೂ ಹ್ಯಾಷ್‌ ಆಯಿಲ್‌ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಸೇರಿ ಒಟ್ಟು ನಾಲ್ಕು ಮಂದಿಯನ್ನು ಮಡಿವಾಳ ಉಪ ವಿಭಾಗದ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಬಂಧಿಸಿದ್ದರು.ಆಂಧ್ರಪ್ರದೇಶದಿಂದ ಕಾಸರಗೋಡಿಗೆ ಟೂರಿಸ್ಟ್‌ ಬಸ್‌ನಲ್ಲಿ ಸಾಗಿಸುತ್ತಿದ್ದ 240 ಕಿಲೋ ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ವಿದ್ಯಾನಗರ ಠಾಣೆ ಪೊಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದರು.

ನಿತ್ಯವೂ ಸಾವಿರಾರು ಬಸ್‌ಗಳು ರಾಜ್ಯ, ಅಂತಾರಾಜ್ಯ ನಡುವೆ ಸಂಚರಿಸುತ್ತಿದ್ದು, ಕೆಎಸ್ಸಾರ್ಟಿಸಿಯು ಕೆಲವು ತಿಂಗಳ ಹಿಂದೆ ಕಾರ್ಗೋ ಸೇವೆ ಆರಂಭಿಸಿದೆ. ಪಾರ್ಸೆಲ್‌ ಪಡೆಯುವ ವೇಳೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಪಾರ್ಸೆಲ್‌ ನೀಡುವವರಿಂದಲೂ ಮುಚ್ಚಳಿಕೆ ಪತ್ರ ಕಡ್ಡಾಯವಾಗಿ ಪಡೆಯಲಾಗುತ್ತಿದೆ.

ಈ ಹಿಂದೆ ಸಾರ್ವಜನಿಕರು ಚಾಲಕ ಅಥವಾ ನಿರ್ವಾಹಕನ ಕೈಯಲ್ಲಿ ಕಟ್ಟುಗಳನ್ನು ನೀಡಿ ತಮಗೆ ಬೇಕಾದವರಿಗೆ ತಲುಪಿಸುತ್ತಿದ್ದರು. ಆದರೆ ಇನ್ನು ಮುಂದೆ ವಾರಸುದಾರರಿಲ್ಲದ ಪಾರ್ಸೆಲ್‌ಗ‌ಳ (ಕಾರ್ಗೋ ಸೇವೆ ಹೊರತು ಪಡಿಸಿ) ರವಾನೆಯನ್ನು ನಿರ್ಬಂಧಿಸಲು ನಿಗಮ ನಿರ್ಧರಿಸಿದೆ.

ಇನ್ನು ಕರಾವಳಿಯಲ್ಲೂ ಕೂಡ ಸ್ಥಳೀಯ ಖಾಸಗಿ ಬಸ್‌ಗಳಲ್ಲಿಯೂ ಚಾಲಕ, ನಿರ್ವಾಹಕರ ಮೂಲಕ ಪಾರ್ಸೆಲ್‌ ಗಳು ರವಾನೆಯಾಗುತ್ತದೆ. ಈ ವೇಳೆ ಜಾಗರೂಕರಾಗಿರುವಂತೆ ಖಾಸಗಿ ಬಸ್‌ ಮಾಲಕರ ಸಂಘದಿಂದಲೂ ಸೂಚನೆ ನೀಡಲಾಗಿದೆ.


ಭಯೋತ್ಪಾದನ ಚಟುವಟಿಕೆಯಲ್ಲಿ ಬಂಧಿತನಾದರೆ ಆಯಾ ರಾಜ್ಯದ ಗೃಹ ಇಲಾಖೆ ಮೂಲಕ ಸ್ಥಳೀಯ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಕಲೆ ಹಾಕಿ ವಿಚಾರಣೆ ನಡೆಸಲಾಗುತ್ತದೆ. ಆದರೆ ಈ ತನಕ ಅಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಅಲ್ಲದೆ ನಾಪತ್ತೆಯಾದ ವ್ಯಕ್ತಿ ನೆಕ್ಕಿಲಾಡಿ ಪರಿಸರದಲ್ಲಿ ತಾನು ಪಡೆದ ಸಾಲವನ್ನು ಮರು ಪಾವತಿಸುವುದನ್ನು ತಪ್ಪಿಸುವ ಸಲುವಾಗಿ ತಾನು ತನಿಖಾ ತಂಡದ ವಶವಾಗಿರುವ ಸುದ್ದಿ ಹಬ್ಬಿಸಿರುವ ಶಂಕೆಯೂ ಇದೆ ಎನ್ನಲಾಗುತ್ತಿದೆ. ಈ ಎಲ್ಲ ಕೋನಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಹಿಮಾಚಲ ಪ್ರದೇಶದ ಪೊಲೀಸರನ್ನು ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!