- Advertisement -
![]()
- Advertisement -
ಕಡಬ:ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿದ್ದಾತ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ನಿವಾಸಿ ಅಂಜನ್ ಸಿ.ಎಂ. ನಾಪತ್ತೆಯಾದ ವಿದ್ಯಾರ್ಥಿ. ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಮಂಗಳವಾರದಂದು ಕಾಲೇಜಿಗೆ ತೆರಳದೆ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ.ಈ ಬಗ್ಗೆ ಆತನ ಮನೆಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಲಾಗಿದ್ದು, ಪತ್ತೆಯಾಗದ ಹಿನ್ನೆಲೆಯಲ್ಲಿ ಅಂಜನ್ ನನ್ನು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ರಾಮಕುಂಜೇಶ್ವರ ವಸತಿ ನಿಲಯದ ಹಾಸ್ಟೆಲ್ ಮ್ಯಾನೇಜರ್ ಕಡಬ ಠಾಣೆಗೆ ದೂರು ನೀಡಿದ್ದರು.
ಈ ನಡುವೆ ಅಂಜನ್ ಊರಿಗೆ ತೆರಳುವುದಾಗಿ ತನ್ನ ಗೆಳೆಯರಲ್ಲಿ ಹೇಳಿದ್ದು, ಬುಧವಾರ ಬೆಳಿಗ್ಗೆ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
- Advertisement -


