- Advertisement -


- Advertisement -
ಕಾಸರಗೋಡು: ನಾಪತ್ತೆಯಾಗಿದ್ದ ಅಪ್ರಾಪ್ತೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಪೊಲೀಸ್ ಠಾಣೆಗೆ ಹಾಜರಾದ ಘಟನೆ ಕಾಸರಗೋಡಿನ ಬೋವಿಕ್ಕಾನ ಎಂಬಲ್ಲಿ ನಡೆದಿದೆ.
ವಿದ್ಯಾರ್ಥಿನಿ ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಳು. ಈಕೆ ಕಾಲೇಜೊಂದರಲ್ಲಿ ಪದವಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿಗೆಂದು ಹೋದವಳು ವಾಪಸ್ ಮನೆಗೆ ಹಿಂತಿರುಗಲಿಲ್ಲ. ಈ ಬಗ್ಗೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು.
ಇದೇ ವೇಳೆ ಈಕೆ ಪೆರ್ಲದಲ್ಲಿ ತನ್ನ ಪ್ರಿಯಕರನ ಜೊತೆ ಇರುವುದಾಗಿ ತಿಳಿದುಬಂದಿತ್ತು. ಅದರಂತೆ ಬುಧವಾರ ಬೆಳಗ್ಗೆ ಯುವತಿ ಹಾಗೂ ಪ್ರಿಯಕರ ಬದಿಯಡ್ಕ ಠಾಣೆಗೆ ಹಾಜರಾಗಿದ್ದರು. ಈ ಮಾಹಿತಿ ತಿಳಿದ ಆದೂರು ಪೊಲೀಸರು ಬದಿಯಡ್ಕಕ್ಕೆ ಆಗಮಿಸಿ ಯುವತಿ ಮತ್ತು ಪ್ರಿಯಕರನನ್ನು ಆದೂರಿಗೆ ಕರೆದೊಯ್ದು ಸಮಗ್ರ ತನಿಖೆ ನಡೆಸಿದರು.
- Advertisement -


