- Advertisement -
- Advertisement -
ಮಂಡ್ಯ: ಇಲ್ಲಿನ ಶ್ರೀರಂಗಪಟ್ಟಣದಲ್ಲಿ ಅಜ್ಜಿಯ ಅಸ್ಥಿ ವಿಸರ್ಜನೆಗೆಂದು ಕಾವೇರಿ ನದಿಗೆ ಇಳಿದ ಮೊಮ್ಮಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಧಾರುಣ ಘಟನೆ ನಡೆದಿದೆ.
ಶ್ರೀಪ್ರಸಾದ್ (32) ನೀರುಪಾಲಾದ ವ್ಯಕ್ತಿಯಾಗಿದ್ದು ಅಜ್ಜಿಯ ಅಸ್ಥಿ ವಿಸರ್ಜನೆಗೆ ಎಂದು ಕಾವೇರಿ ನದಿಗೆ ಇಳಿದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕುಟುಂಬಸ್ಥರ ಜೊತೆ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಶ್ರೀಪ್ರಸಾದ್ ಅಸ್ಥಿ ವಿಸರ್ಜನೆಗಾಗಿ ಮೂವರ ಜೊತೆಗೆ ನದಿ ನೀರಿಗಿಳಿದಿದ್ದಾರೆ. ಈ ವೇಳೆ ಶ್ರೀಪ್ರಸಾದ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇನ್ನಿಬ್ಬರು ಈಜಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.
- Advertisement -