Monday, June 8, 2026
Homeಕರಾವಳಿಮಂಗಳೂರುಮಂಗಳೂರು; ರಾಜಕಾಲುವೆ ದಾಟುವಾಗ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿ

ಮಂಗಳೂರು; ರಾಜಕಾಲುವೆ ದಾಟುವಾಗ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿ

- Advertisement -
- Advertisement -

ಮಂಗಳೂರು; ರಾಜಕಾಲುವೆ ದಾಟುವಾಗ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲೋನಿಯ ಕೇಶವ ಶೆಟ್ಟಿ (64) ಮೃತ ವ್ಯಕ್ತಿ.

ಕೂಲಿ ಕಾರ್ಮಿಕರಾಗಿರುವ ಕೇಶವ ಶೆಟ್ಟಿ ಅವರು ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಪಿಲಾರುವಿನ ರಾಜಕಾಲುವೆಯ ಕಾಲುಸಂಕ ದಾಟುತ್ತಿದ್ದ ವೇಳೆ ನೀರುಪಾಲಾಗಿದ್ದರು. ಈ ವೇಳೆ ಉಕ್ಕಿ ಹರಿಯುತ್ತಿದ್ದ ಮನೆ ಮಂದಿ, ನೆರೆಹೊರೆಯವರು ಸೇರಿ ಕಾಲುವೆಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ್ದರೂ ಕೇಶವ ಅವರು ಸಿಕ್ಕಿರಲಿಲ್ಲ. ಕೇಶವ ಅವರ ಕೊಡೆ ಕಾಲುವೆಯಲ್ಲಿ ಪತ್ತೆಯಾಗಿತ್ತು. ಮನೆ ಮಂದಿ ಗುರುವಾರ ಉಳ್ಳಾಲ ಠಾಣೆಯಲ್ಲಿ ಕೇಶವ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಶುಕ್ರವಾರ ಮಧ್ಯಾಹ್ನ ಮೃತ ದೇಹ ಪತ್ತೆಯಾಗಿದೆ

- Advertisement -

Latest News

error: Content is protected !!