ಹಾವೇರಿ:ವ್ಯಕ್ತಿ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆತನ ಇಷ್ಟದ ಡಾಬಾ ತಲುಪುತ್ತಿದ್ದಂತೆ ಆತ ಉಸಿರಾಡಿದ ವಿಚಿತ್ರ ಪ್ರಸಂಗ ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ
ಹಾವೇರಿ:ವ್ಯಕ್ತಿ ಮೃತಪಟ್ಟಿದ್ದಾನೆಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕುಟುಂಬಸ್ಥರು; ಆತನ ಇಷ್ಟದ ಡಾಬಾ ತಲುಪುತ್ತಿದ್ದಂತೆ ಕಾದಿತ್ತು ಶಾಕ್
ಬಿಷ್ಟಪ್ಪ ಗುಡಿಮನಿ (45) ಎಂಬವರು, ನಾಲ್ಕು ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಈ ವೇಳೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.ಅಲ್ಲದೇ ಊರಿಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.
ಅದರಂತೆ ಮನೆ ಮಂದಿ ಊರಿಗೆ ವಾಪಾಸ್ ಕರೆದುಕೊಂಡು ಹೋಗುತ್ತಿದ್ದಾಗ, ಅವರು ಊಟ ಮಾಡುತ್ತಿದ್ದ ಇಷ್ಟವಾದ ಡಾಬಾ ಮುಂದೆ ಬರುತ್ತಿದ್ದಂತೆ ಅವರ ಪತ್ನಿ ಡಾಬಾ ಬಂತು ನೋಡು ಊಟ ಮಾಡುತ್ತೀಯಾ ಎಂದು ಕಣ್ಣೀರಿಟ್ಟಿದ್ದಾರೆ. ಆಗ ಬಿಷ್ಟಪ್ಪ ಉಸಿರಾಡಿಸಲು ಆರಂಭಿಸಿದ್ದಾರೆ.
ಕೂಡಲೇ ಬಿಷ್ಟಪ್ಪನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಈಗ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಷ್ಟಪ್ಪ ನಿಧನ ಸುದ್ದಿ ಬ್ಯಾನರ್ ಸಹ ಹಾಕಿದ್ದರು. ವಾಟ್ಸಾಪ್ ಗ್ರೂಪ್ ನಲ್ಲಿ ಓಂ ಶಾಂತಿ ಎಂದು ಸಹ ಹಾಕಿದ್ದರು. ಇದೀಗ ಆತ ಬದುಕಿದ್ದು ದೇವರ ಪವಾಡ ಎನ್ನುತ್ತಿದ್ದಾರೆ ಸ್ಥಳೀಯರು.