Sunday, June 7, 2026
Homeಅಪರಾಧಪುತ್ತೂರು: ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಗೆ ಚಾಕಲೇಟ್ ಆಮಿಷವೊಡ್ಡಿ ಕಿರುಕುಳ; ಮನೆಯವರಿಂದ ಪೊಲೀಸರಿಗೆ ಮಾಹಿತಿ!

ಪುತ್ತೂರು: ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಗೆ ಚಾಕಲೇಟ್ ಆಮಿಷವೊಡ್ಡಿ ಕಿರುಕುಳ; ಮನೆಯವರಿಂದ ಪೊಲೀಸರಿಗೆ ಮಾಹಿತಿ!

- Advertisement -
- Advertisement -

ಪುತ್ತೂರು: ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ಚಾಕಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಕಿರುಕುಳ ನೀಡಿದ ಘಟನೆ ಕುಂಜೂರುಪಂಜದಲ್ಲಿ ನಡೆದಿದೆ.

ಸೆ.23ರಂದು ಮಧ್ಯಾಹ್ನ ಕುಂಜೂರುಪಂಜ ಶಾಲೆಯ ವಿದ್ಯಾರ್ಥಿನಿ ತನ್ನ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಆಕೆಯ ಬಳಿ ಬೈಕ್ ನಿಲ್ಲಿಸಿ ನಿನಗೆ ಚಾಕಲೇಟ್ ಕೊಡಿಸುತ್ತೇನೆ ನನ್ನೊಂದಿಗೆ ಬೈಕ್‌ನಲ್ಲಿ ಬಾ ಎಂದು ಕರೆದಿರುವುದಾಗಿ ಹೇಳಲಾಗಿದೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಅಲ್ಲಿಂದ ಸುರಕ್ಷಿತವಾಗಿ ಓಡಿ ಹೋಗಿದ್ದು, ಘಟನೆ ಕುರಿತು ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರು ಈ ಕುರಿತು ಶಾಲೆಗೆ ಹಾಗೂ ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!