Friday, October 16, 2026
Homeಕರಾವಳಿಉಡುಪಿಉಡುಪಿ: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ತೆಂಗಿನ ಮರ ಮುರಿದು ಬಿದ್ದು ಸಾ*ವು

ಉಡುಪಿ: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ತೆಂಗಿನ ಮರ ಮುರಿದು ಬಿದ್ದು ಸಾ*ವು

- Advertisement -
- Advertisement -

ಉಡುಪಿ: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ತೆಂಗಿನ ಮರ ಮುರಿದು ಬಿದ್ದು ಸಾ*ವನ್ನಪ್ಪಿರುವ ಘಟನೆ ಬೈಂದೂರು ಸಮೀಪ ನಡೆದಿದೆ. ಶಿರೂರು ಗ್ರಾಮ ರಾಮ (52) ಮೃತ ದುರ್ದೈವಿ,

ರಾಮ ಅವರು ದಿನಾಂಕ 15/08/2025 ರಂದು ಮಧ್ಯಾಹ್ನ 02:45 ಗಂಟೆಗೆ ತನ್ನ ಸ್ನೇಹಿತ ಚಂದ್ರ ರವೊಂದಿಗೆ ಮೀನು ಹಿಡಿಯಲು ಸ್ನೇಹಿತನ ಬೈಕ್ ನಲ್ಲಿ ತೆರಳುತ್ತಿದ್ದಾಗ ಶಿರೂರು ಗ್ರಾಮದ ಕಳಿಹಿತ್ಲು ಸಮುದ್ರದ ಬಳಿ ಕಾಂಕ್ರೀಟ್‌ ರಸ್ತೆಯಲ್ಲಿ ತೆರಳುತ್ತಿರುವಾಗ ವಿಪರೀತ ಗಾಳಿ ಮಳೆಗೆ ರಸ್ತೆ ಪಕ್ಕದಲ್ಲಿದ್ದ ತೆಂಗಿನ ಮರ ಬುಡ ತುಂಡಾಗಿ ಅವರು ಹೋಗುತ್ತಿದ್ದ ಬೈಕ್ ಮೇಲೆ ಬಿದ್ದಿದ್ದು ರಾಮನಿಗೆ ತಲೆಗೆ ಮತ್ತು ಮೈಕೈ ಯಿಗೆ ಹಾಗೂ ಚಂದ್ರನಿಗೆ ಮೈ ಗೆ ಪೆಟ್ಟಾಗಿದ್ದು ಅವರಿಬ್ಬರನ್ನು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಗಂಭೀರವಾಗಿ ಗಾಯಗೊಂಡ ರಾಮ ರವರು ಮೂಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ದಿನಾಂಕ 24/08/2025 ರಂದು ಬೆಳಗಿನ ಜಾವ 01:53 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Latest News

error: Content is protected !!