Wednesday, June 24, 2026
Homeಕರಾವಳಿಸಂಬಂಧಿಕರೊಂದಿಗೆ ಜಮೀನು ವಿವಾದಕ್ಕೆ ವ್ಯಕ್ತಿಯೊಬ್ಬ ಗುಂಡಿನ ದಾಳಿ !

ಸಂಬಂಧಿಕರೊಂದಿಗೆ ಜಮೀನು ವಿವಾದಕ್ಕೆ ವ್ಯಕ್ತಿಯೊಬ್ಬ ಗುಂಡಿನ ದಾಳಿ !

- Advertisement -
- Advertisement -

ಪುತ್ತೂರು: ಇಲ್ಲಿನ ಶಾಂತಿಗೋಡು ಗ್ರಾಮದ ಕೊಯಕುಡೆ ವೀರಮಂಗಲ ಎಂಬಲ್ಲಿ ಸಂಬಂಧಿಕರೊಬ್ಬರ ಜೊತೆಗಿನ ಜಮೀನು ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.

ತುಂಡು ಜಮೀನಿನಲ್ಲಿ ಸಾಗುವಳಿ ಮಾಡುವ ವಿಚಾರವಾಗಿ ಸಹೋದರ ಹಾಗೂ ಅತ್ತಿಗೆಯೊಂದಿಗೆ ನಡೆದ ಮಾತಿನ ಚಕಮಕಿಯಲ್ಲಿ ಆರೋಪಿ ದೇವಪ್ಪ ಗೌಡ ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ.ದೇವಪ್ಪ ಅವರ ಸೊಸೆ ದರ್ನಮ್ಮ, ಅವರ ಪತಿ ಬಾಬುಗೌಡ ಹಾಗೂ ಮಗ ರವಿ ಕೆ ತಮ್ಮ ಸ್ವಂತ ಜಮೀನಿನಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾಗ ದೇವಪ್ಪ ಗೌಡ ರೈಫಲ್ ಸಮೇತ ಬಂದು ಜಮೀನು ತನಗೆ ಸೇರಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಈ ಜಮೀನಿನಲ್ಲಿ ತರಕಾರಿ ಬೆಳೆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಈ ವೇಳೆ ವಾಗ್ವಾದ ನಡೆದು ದರ್ನಮ್ಮ ಅವರ ಕುಟುಂಬದ ಮೇಲೆ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ ಕಲಂ 506, 307 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಕಲಂ 25 ಮತ್ತು 27 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!