Thursday, June 4, 2026
Homeಅಪರಾಧಮಂಗಳೂರು: 8 ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ !

ಮಂಗಳೂರು: 8 ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ !

- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲೊಂದು ಮನಕಲಕುವ ಘಟನೆ ನಡೆದಿದೆ. 8 ವರ್ಷ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ.

ಗುರುಪುರ ಸೇತುವೆಯ ಹತ್ತಿರದ ಪರಾರಿ ಕ್ರಾಸ್‌ನಲ್ಲಿ ರಾಜ್ ಟೈಲ್ಸ್ ಎಂಬ ಫ್ಯಾಕ್ಟರಿ ಇದ್ದು, ಇಲ್ಲಿ ಕರ್ನಾಟಕದ 10 ಮತ್ತು ಉತ್ತರ ಭಾರತದ ಹಲವು ಯುವಕರು ಹಾಗೂ ನಾಲ್ಕೈದು ಮಹಿಳೆಯರ ಸಹಿತ ಸುಮಾರು 30ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ.

ಅಸ್ಸಾಂ ಕುಟುಂಬದ ಮಹಿಳೆಯ 8 ವರ್ಷದ ಹೆಣ್ಣು ಮಗು ಸಂಜೆ 4 ಗಂಟೆ ಸುಮಾರಿಗೆ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಸಂಜೆ ಕಾರ್ಖಾನೆಯ ಸಮೀಪದ ಮೋರಿಯಲ್ಲಿ ಪುಟ್ಟ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಈ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರೇ ಅತ್ಯಾಚಾರಗೈದು ಕೊಲೆ ಮಾಡಿರಬೇಕು ಎಂಬ ಶಂಕೆ ವ್ಯಕ್ತವಾಗಿದ್ದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಂದಿ ಯುವಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿ ಈ ಘಟನೆ ನಡೆದಿದ್ದು ಆರೋಪಿ ಯಾರೆಂದು ತನಿಖೆ ಬಳಿಕ ಗೊತ್ತಾಗಬೇಕು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Latest News

error: Content is protected !!