Tuesday, July 1, 2025
Homeಕರಾವಳಿಬೆಂಗಳೂರಿನಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಳ್ಳಾಲದ ಬಳಿ ಮನೆಯೊಂದರ ಬಾವಿಯಲ್ಲಿ ಪತ್ತೆ

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಳ್ಳಾಲದ ಬಳಿ ಮನೆಯೊಂದರ ಬಾವಿಯಲ್ಲಿ ಪತ್ತೆ

spot_img
- Advertisement -
- Advertisement -

ಮಂಗಳೂರು; ಬೆಂಗಳೂರಿನಿಂದ ಬಂದು ನಾಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹ ಉಳ್ಳಾಲ ಬಳಿಯ ಅಂಬಿಕಾರೋಡ್ ಹೆದ್ದಾರಿ ಅಂಚಿನಲ್ಲಿರುವ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

ಪಾಸ್ ಪೋರ್ಟ್ ರಿನಿವಲ್ ಮಾಡಿಸಲೆಂದು ಬೆಂಗಳೂರಿನಿಂದ ಬಂದು ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದ ಮಹಾಂತೇಶ್ ಎ.ಎಸ್ (35) ತೊಕ್ಕೊಟ್ಟಿನ ಲಾಡ್ಜ್ ನಲ್ಲಿದ್ದರು.

ಮಹಾಂತೇಶ್ ನಾಲ್ಕು ದಿನದ ಮೊದಲು ತೊಕ್ಕೊಟ್ಟು ಕಾಪಿಕಾಡಿನಲ್ಲಿರುವ ಲಾಡ್ಜ್‌ ಗೆ ಬಂದು ತಂಗಿದ್ದರು. ಶುಕ್ರವಾರ ಸಂಜೆ ಲಾಡ್ಜ್ ಸಿಬ್ಬಂದಿ ರೂಮನ್ನು ತಪಾಸಣೆ ಮಾಡಿದಾಗ ಮಹಾಂತೇಶ್ ನಾಪತ್ತೆಯಾಗಿದ್ದನ್ನು ಗಮನಿಸಿ ಈ ಬಗ್ಗೆ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ಅಂಬಿಕಾ ರೋಡ್ ಹೆದ್ದಾರಿ ಅಂಚಿನಲ್ಲಿರುವ ಮನೆಯ ಬಾವಿಯಲ್ಲಿ ಮಹಾಂತೇಶ್‌ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -
spot_img

Latest News

error: Content is protected !!