Monday, June 8, 2026
Homeಅಪರಾಧಪತ್ನಿಯನ್ನೇ ಕೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದಿದ್ದ ಪಾಪಿ ಪತಿ ಅಂದರ್...!

ಪತ್ನಿಯನ್ನೇ ಕೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದಿದ್ದ ಪಾಪಿ ಪತಿ ಅಂದರ್…!

- Advertisement -
- Advertisement -

ಹಾಸನ: ಪತ್ನಿಯನ್ನು ಕೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದು, ಘಟನೆಯಲ್ಲಿ ತಾನು ಗಂಭೀರವಾಗಿ ಗಾಯಗೊಂಡಿದ್ದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಪತಿ ಮಹಾಶಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮಹೇಶ್ ಬಂಧಿತ ಆರೋಪಿ. ನಿನ್ನೆ ಅಪಘಾತದಲ್ಲಿ ಪತ್ನಿ ಮೃತಪಟ್ಟು ತನಗೆ ಗಾಯವಾಗಿದೆ ಎಂದು ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದ. ಈ ಕುರಿತು ಸಂಬಂಧಿಕರಿಗೂ ಮಾಹಿತಿ ನೀಡಿದ್ದ. ಅಪಘಾತದ ಸ್ಥಳ ನೋಡಿದ ಪೊಲೀಸರು ಅನುಮಾನಗೊಂಡು ಮಹೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಾಪಿ ಪತಿ ಸತ್ಯ ಬಯಲಾಗಿದೆ.

ಮೂರು ವರ್ಷಗಳ ಹಿಂದೆ ಅರಕಲಗೋಡು ನಿವಾಸಿ 23 ವರ್ಷದ ಪ್ರೀತಿ ಎಂಬಾಕೆಯನ್ನು ವಿವಾಹವಾಗಿದ್ದ ಮಹೇಶ್, ಕೌಟುಂಬಿಕ ಕಲಹದ ಕಾರಣಕ್ಕೆ ಪತ್ನಿ ಪ್ರೀತಿಯನ್ನು ಹತ್ಯೆ ಮಾಡಿದ್ದ. ಬಳಿಕ ಆಕ್ಸಿಡೆಂಟ್ ನಲ್ಲಿ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಿದ್ದ. ಇದೀಗ ಆರೋಪಿ ಪತಿ ಮಹೇಶ್ ನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!