- Advertisement -
- Advertisement -
ಮಣಿಪಾಲ : ಹಿರೇಬೆಟ್ಟು ಮುಡಾಯಿಕೋಡಿಯ ದಾರಿಯಲ್ಲಿ ಅಕ್ರಮವಾಗಿ ಕೋವಿ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಿರೇಬೆಟ್ಟು ಅಗ್ರಬೈಲು ನಿವಾಸಿ ಉಮೇಶ್ ನಾಯಕ್ (46) ಎಂದು ಗುರುತಿಸಲಾಗಿದೆ. ಈತ ಅಕ್ರಮವಾಗಿ ಕೋವಿಯನ್ನು ಹಿಡಿದುಕೊಂಡು ತಿರುಗಾಡುತಿದ್ದ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಈತನ ಬಳಿಯಲ್ಲಿದ್ದ ಅನಧಿಕೃತ ಎಸ್‌ಬಿಬಿಎಲ್ ಮಾದರಿಯ 1 ಕೋವಿ ಹಾಗೂ 2 ತೋಟೆ(ಮದ್ದುಗುಂಡು)ಗಳನ್ನು ವಶಪಡಿಸಿಕೊಳ್ಳಲಾಗಿದೆ.
- Advertisement -