Friday, December 6, 2024
Homeಅಪರಾಧಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ಢಿಕ್ಕಿ; ಘಟನೆಯಿಂದ ಹಲವು ವಾಹನಗಳು ಜಖಂ

ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ಢಿಕ್ಕಿ; ಘಟನೆಯಿಂದ ಹಲವು ವಾಹನಗಳು ಜಖಂ

spot_img
- Advertisement -
- Advertisement -

ಮಣಿಪಾಲ: ಇಲ್ಲಿನ ಕೆಳ ಪರ್ಕಳದಲ್ಲಿ ಲಾರಿಯೊಂದು ಗ್ರಾನೈಟ್‌ ಅನ್ನು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ಡಿಕ್ಕಿ ಹೊಡೆದು ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ನ.9 ಶನಿವಾರದಂದು ಸಂಭವಿಸಿದೆ.

ಘಟನೆಯಿಂದ ಕೆಲಪರ್ಕಳದಲ್ಲಿ ಗಣಪತಿ ನಾಯಕ್‌ ಅವರ ಮಾಲಕತ್ವದ ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ನಾಲ್ಕೈದು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.

ಘಟನೆಯ ವಿವರ: ಕೆಳಪರ್ಕಳದ ಹಳೆ ಡಾಮರು ರಸ್ತೆಯ ಏರಿನ ಜಾಗದಲ್ಲಿ ಬೆಂಗಳೂರಿನಿಂದ ಗ್ರಾನೈಟ್‌ ತುಂಬಿಕೊಂಡು ಪರ್ಕಳದ ಹೆರ್ಗಾ ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ನುಗ್ಗಿದೆ. ಇದರ ಪರಿಣಾಮವಾಗಿ ಹಲವು ದ್ವಿಚಕ್ರ ವಾಹನಗಳು ನುಜ್ಜುಗುಜ್ಜಾಗಿದೆ. ಅಷ್ಟೆ ಅಲ್ಲದೆ ಲಾರಿಯಲ್ಲಿದ್ದ ಗ್ರಾನೈಟ್ ನೆಲಕ್ಕೆ ಬಿದ್ದಿದೆ. ಲಾರಿ ಹಿಮ್ಮುಖವಾಗಿ ಬರುತ್ತಿದ್ದಂತೆ ಗ್ಯಾರೇಜ್ ನಲ್ಲಿದ್ದವರು ಓಡಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಈ ಭಾಗದಲ್ಲಿ ಘನ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದು. ಇಲ್ಲಿನ ಏರು ಪ್ರದೇಶ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಘನ ವಾಹನಗಳು ಹಿಮ್ಮುಖವಾಗಿ ಚಲಿಸಿ ಹೆಚ್ಚಿನ ಅವಘಡಗಳು ಈ ಹಿಂದೆಯೂ ಸಂಭವಿಸಿವೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!