Thursday, June 4, 2026
Homeಕರಾವಳಿಉಡುಪಿಪೆರಂಪಳ್ಳಿಯ ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ; ಭಯಭೀತರಾದ ಸ್ಥಳೀಯರು

ಪೆರಂಪಳ್ಳಿಯ ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ; ಭಯಭೀತರಾದ ಸ್ಥಳೀಯರು

- Advertisement -
- Advertisement -

ಮಣಿಪಾಲ: ಇಲ್ಲಿನ ಪೆರಂಪಳ್ಳಿಯಲ್ಲಿರುವ ಮನೆಯೊಂದರ ಕಾಂಪೌಂಡ್ ಒಳಗೆ ಚಿರತೆಯೊಂದು ಶುಕ್ರವಾರದಂದು ತಡರಾತ್ರಿಯಲ್ಲಿ ಕಾಣಿಸಿಕೊಂಡಿದೆ. 

ಮನೆಯ ನಾಯಿಯು ಹೊರಗೆ ಬೊಗಳುತ್ತಿದ್ದುದನ್ನು ಗಮನಿಸಿದ ಮನೆ ಮಂದಿ ಬಾಗಿಲು ತೆಗೆದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದವು ಕೇಳುತ್ತಿರಲಿಲ್ಲ. ಕೆಲವು ದಿನಗಳಿಂದ ಮಣಿಪಾಲ ಆಸುಪಾಸು ಚಿರತೆ ಓಡಾಟದ ಬಗ್ಗೆ ಮಾಹಿತಿ ತಿಳಿದಿದ್ದ ಮನೆಮಂದಿಯೂ ಸುಮ್ಮನಿದ್ದರು. ಬೆಳಗ್ಗೆ ಮನೆಯ ಸಿಸಿಟಿವಿ ದ್ರಶ್ಯಾವಳಿ ಗಮನಿಸಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವ ದ್ರಶ್ಯ ಕಂಡುಬಂದು ಭಯಭೀತರಾಗಿದ್ದಾರೆ.

ಇನ್ನು ನಾಯಿಯು ರಾತ್ರಿ ಇಡೀ ಕಣ್ಮರೆಯಾಗಿದ್ದು, ಬೆಳಗ್ಗೆ ಪ್ರತ್ಯಕ್ಷವಾಗಿದೆ. ಈಗಾಗಿ ನಾಯಿಯು ಚಿರತೆಯ ಬಾಯಿಯಿಂದ ರಕ್ಷಿಸಲ್ಪಟ್ಟಿದೆ ಎನ್ನಲಾಗಿದೆ. ಈ ಘಟನೆಯಿಂದ ಮಣಿಪಾಲ, ಪೆರಂಪಳ್ಳಿ ಭಾಗದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕ್ಯೆಗೊಳ್ಳುವಂತೆ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!