Thursday, June 4, 2026
Homeತಾಜಾ ಸುದ್ದಿಸಹೋದರನ ಚಿಕಿತ್ಸೆಗಾಗಿ 48 ಕೋಟಿ ಸಂಗ್ರಹಿಸಿದ್ದ ಕೇರಳದ ಬಾಲಕಿ ಅಪರೂಪದ ಕಾಯಿಲೆಗೆ ಬಲಿ

ಸಹೋದರನ ಚಿಕಿತ್ಸೆಗಾಗಿ 48 ಕೋಟಿ ಸಂಗ್ರಹಿಸಿದ್ದ ಕೇರಳದ ಬಾಲಕಿ ಅಪರೂಪದ ಕಾಯಿಲೆಗೆ ಬಲಿ

- Advertisement -
- Advertisement -

ಕೇರಳ; ತನ್ನ ಸಹೋದರನ ಚಿಕಿತ್ಸೆಗೆ ಬರೊಬ್ಬರಿ‌ 46 ಕೋಟಿ ರೂ.‌ಸಂಗ್ರಹಿಸಿ ತಮ್ಮ ಜೀವ ಉಳಿಸಿದ್ದ ಕೇರಳದ ತಿರುವನಂತಪುರಂದ ಬಾಲಕಿ ಅಫ್ರಾ ಅಪರೂಪದ ಅನುವಂಶಿಕ ಕಾಯಿಲೆಗೆ ಬಲಿಯಾಗಿದ್ದಾಳೆ.

ಗಾಲಿಕುರ್ಚಿ ಬಂಧಿಯಾಗಿದ್ದ 16 ವರ್ಷದ ಬಾಲಕಿ ಅಫ್ರಾ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದಳು. ಕಳೆದ ವರ್ಷ ಅದೇ ಕಾಯಿಲೆಯಿಂದ ಬಳಲುತ್ತಿರುವ ತನ್ನ ಅಂಬೆಗಾಲಿಡುವ ಸಹೋದರ ಮೊಹಮ್ಮದ್‌ನನ್ನು ಉಳಿಸಲು 18 ಕೋಟಿ ರೂಪಾಯಿ ಸಂಗ್ರಹಿಸಲು ಜನರಿಗೆ ಮನವಿ ಮಾಡಿದ್ದರು. ವಿಶ್ವದಾದ್ಯಂತ ಇದು ಭಾರೀ ಸುದ್ದಿಯಾಗಿ 46 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಸಂಗ್ರಹವಾಗಿತ್ತು.

ದೇಣಿಗೆ ಹಣದಿಂದ ನಿಗದಿತ ಔಷಧವನ್ನು ಖರೀದಿಸಲಾಗಿತ್ತು. ಕಳೆದ ಆಗಸ್ಟ್ ನಲ್ಲಿ ಮೊಹಮ್ಮದ್ ಅವರಿಗೆ ಡೋಸ್ ನೀಡಲಾಗಿತ್ತು. ಉಳಿದ ಹಣವನ್ನು ಅದೇ ಕಾಯಿಲೆಯಿಂದ ಬಳಲುತ್ತಿರುವ ಬೇರೆ ಮಕ್ಕಳಿಗೆ ಚಿಕಿತ್ಸೆಗೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಹಫ್ರಾ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು.  ಆಕೆಯನ್ನು ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

- Advertisement -

Latest News

error: Content is protected !!