Thursday, June 4, 2026
Homeಕರಾವಳಿಕಡಬ: ಹಳ್ಳದ ನೀರು ಮನೆಗೆ ನುಗ್ಗಿ ಜಲಾವೃತ: ರಾತ್ರೋರಾತ್ರಿ ಮನೆ ಮಂದಿಯ ಸ್ಥಳಾಂತರ

ಕಡಬ: ಹಳ್ಳದ ನೀರು ಮನೆಗೆ ನುಗ್ಗಿ ಜಲಾವೃತ: ರಾತ್ರೋರಾತ್ರಿ ಮನೆ ಮಂದಿಯ ಸ್ಥಳಾಂತರ

- Advertisement -
- Advertisement -

ಕಡಬ: ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ರಣ ಮಳೆಗೆ ಕಡಬ ತಾಲೂಕಿನ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ರೆಂಜಿಲಾಡಿ ಗ್ರಾಮದ ಕುಬಲಾಡಿಯಲ್ಲಿ ಹಳ್ಳದ ನೀರು ಮನೆಗೆ ನುಗ್ಗಿ ಮನೆ ಜಲಾವೃತವಾಗಿದೆ.

ನೀರು ನುಗ್ಗಿದ ವಿಷಯ ತಿಳಿದ ಸ್ಥಳೀಯ ಅಧಿಕಾರಿಗಳು ಹಾಗೂ NDRF ತಂಡದವರು ಮಧ್ಯರಾತ್ರಿಯೇ ಸ್ಥಳಕ್ಕೆ ತೆರಳಿ ಮನೆ ಮಂದಿಯನ್ನು ರಕ್ಷಣೆ ಮಾಡಿದ್ದಾರೆ.ತನಿಯಪ್ಪ (54) ಭಾಗೀರಥಿ (50) ಚಂದಪ್ಪ (41), ರೇವತಿ (34) ಅರುಣಾ (15)ಅನಿತಾ (9) ಅಂಜಲಿ (6) ಸೇರಿ ಒಟ್ಟು 7 ಜನರನ್ನು ರಕ್ಷಿಸಲಾಗಿದ್ದು ಸದ್ಯ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ರಕ್ಷಣಾ ಕಾರ್ಯ ವೇಳೆ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಗ್ರಾಮಕರಣಿಕ ಸಂತೋಷ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ವಸಂತ ಕುಬಲಾಡಿ ಹಾಗೂ NDRF ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!