Wednesday, June 3, 2026
Homeತಾಜಾ ಸುದ್ದಿಬೆಳ್ತಂಗಡಿ: ಲವ್ ಜಿಹಾದ್ ಶಂಕೆ ಮುಸ್ಲಿಂ ಯುವಕನ ಮನೆಗೆ ಪೊಲೀಸರ ಜೊತೆ ದಾಳಿ ಮಾಡಿದ ಹಿಂದೂ...

ಬೆಳ್ತಂಗಡಿ: ಲವ್ ಜಿಹಾದ್ ಶಂಕೆ ಮುಸ್ಲಿಂ ಯುವಕನ ಮನೆಗೆ ಪೊಲೀಸರ ಜೊತೆ ದಾಳಿ ಮಾಡಿದ ಹಿಂದೂ ಸಂಘಟನೆ- ಹಿಂದೂ ಸಂಘಟನೆ ಮೇಲೆ ಎಫ್ಐಆರ್ ದಾಖಲು.

- Advertisement -
- Advertisement -

ಬೆಳ್ತಂಗಡಿ : ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ಗ್ರಾಮದ ಹಾಂದಿ ಮೂಲದ ಹಿಂದೂ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಕಾಣಿಯೂರು ಗ್ರಾಮದ ಪಿಲಿಗೂಡು ಕ್ವಾಟ್ರಾಸ್ ನಿವಾಸಿ ಮೈಮೂನ ಎಂಬವರ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಸಂಬಂಧಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ಗ್ರಾಮದ ಹಾಂದಿಯ ಯುವಕ ಕರೆತಂದು ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಮತಾಂತರಕ್ಕೆ ಯತ್ನಿಸಿ ಲವ್ ಜಿಹಾದ್ ಮಾಡುತ್ತಿದ್ದ ಎಂಬ ಶಂಕೆಯ ಮೇರೆಗೆ ಬೆಳ್ತಂಗಡಿ ಹಿಂದೂ ಸಂಘಟನೆಗೆ ಬಂದ‌ ಖಚಿತ ಮಾಹಿತಿ ಬಂದಿದ್ದು ಮಂಗಳವಾರ ರಾತ್ರಿ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರ ಜೊತೆಗೂಡಿ ಯುವಕನ ಮನೆಗೆ ದಾಳಿ ಮಾಡಿ ಯುವತಿಯನ್ನು ಪೊಲೀಸರ ಸಹಾಯದಿಂದ ಮಂಗಳೂರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಲು ಮುಂದಾದಗ ನಾನು ನನ್ನ ಮನೆಗೆ ವಾಪಸ್ ಹೋಗುದಾಗಿ ಹೇಳಿದ್ದು ಅದರಂತೆ ಉಪ್ಪಿನಂಗಡಿ ಪೊಲೀಸರು ಯುವತಿಯನ್ನು ಕಾರಿನಲ್ಲಿ ಠಾಣೆಗೆ ಕರೆತಂದು ಮನೆಮಂದಿಗೆ ಕರೆ ಮಾಡಿ ಮಾಹಿತಿ ನೀಡಿ ಠಾಣೆಗೆ ಕರೆಸಿ ಸುರಕ್ಷಿತವಾಗಿ ಆಕೆಯ ಮನೆಯವರ ಜೊತೆ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ‌.

ಘಟನೆ ನಡೆದ ಮೇಲೆ ಯುವತಿಯನ್ನು ಉಪ್ಪಿನಂಗಡಿ ಪೊಲೀಸರು ಖಾಸಗಿ ಮಹಮ್ಮದ್ ರಫೀಕ್ ಎಂಬತನ ಹೆಸರಿನಲ್ಲಿರುವ KA-21-Z-4079 ಬ್ರೀಸಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಇದಕ್ಕೆ ಹಿಂದೂ ಸಂಘಟನೆ ಗರಂ ಅಗಿ ಪೊಲೀಸರ ಮೇಲೆನೆ ಅನುಮಾನ ವ್ಯಕ್ತಪಡಿಸಿದ್ದಾರೆ‌.

ಇನ್ನೂ ಘಟನೆ ಸಂಬಂಧಿಸಿದಂತೆ ಇಂದು ಮೈಮೂನ ಮಗನಾದ ಸಂಶುದ್ದಿನ್ ಉಪ್ಪಿನಂಗಡಿ ಠಾಣೆಗೆ ಹೋಗಿ ಹಿಂದೂ ಸಂಘಟನೆ ಯುವಕರು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು ಅದರಂತೆ ಪೊಲೀಸ್ ಹಿಂದೂ ಸಂಘಟನೆ ಯುವಕರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಕಾನೂನು ರೀತಿಯಾಗಿ ಪೊಲೀಸರ ಜೊತೆ ಹೋಗಿ ಹಿಂದೂ ಯುವತಿಯನ್ನು ರಕ್ಷಣೆ ಮಾಡಲಾಗಿದೆ, ಕರೆತಂದ ಯುವಕ ಆ ಮನೆಯಲ್ಲಿ ಇರಲ್ಲಿಲ್ಲ ಅಷ್ಟೆ ಅದು ಬಿಟ್ಟು ನಾವು ಮನೆಮಂದಿಗೆ ಯಾರಿಗೂ ತೊಂದರೆ ನೀಡಿಲ್ಲ ಬೆದರಿಕೆ ಹಾಕಿಲ್ಲ, ಮನೆಗೆ ಹೋಗುವಾಗ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಅವರ ಜೊತೆಗೂಡಿ ಹೋಗಿದ್ದೇವೆ ಅದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆ ಇದೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ತಿಳಿಸಿದ್ದಾರೆ.

- Advertisement -

Latest News

error: Content is protected !!