Sunday, June 2, 2024
Homeತಾಜಾ ಸುದ್ದಿಡಬಲ್ ಬಡ್ಡಿ ಕೊಡಿಸುವುದಾಗಿ 40 ಮಹಿಳೆಯರಿಗೆ ಪಂಗನಾಮ: 20 ಕೋಟಿ ರೂ. ವಂಚಿಸಿದ ಖತರ್ನಾಕ್ ಜೋಡಿ

ಡಬಲ್ ಬಡ್ಡಿ ಕೊಡಿಸುವುದಾಗಿ 40 ಮಹಿಳೆಯರಿಗೆ ಪಂಗನಾಮ: 20 ಕೋಟಿ ರೂ. ವಂಚಿಸಿದ ಖತರ್ನಾಕ್ ಜೋಡಿ

spot_img
- Advertisement -
- Advertisement -

ಮಂಡ್ಯ: ಚಿನ್ನ ಮನೆಯಲ್ಲಿ ಇದ್ದರೆ ಪ್ರಯೋಜನವಿಲ್ಲ. ನಮ್ಮ ಬ್ಯಾಂಕ್ ನಲ್ಲಿ ಚಿನ್ನ ಇಡಿ ಹೆಚ್ಚು ಬಡ್ಡಿ ಕೊಡಿಸುತ್ತೇನೆ. ತಿಂಗಳಿಗೆ ಪ್ರತಿ ನೂರು ಗ್ರಾಂ.ಗೆ ಶೇ.10ರಂತೆ 10 ಸಾವಿರ ರೂ. ಬಡ್ಡಿ ಬರುತ್ತೆ ಎಂದು ಮಂಡ್ಯ ಜಿಲ್ಲೆಯ 40ಕ್ಕೂ ಹೆಚ್ಚು ಮಹಿಳೆಯರಿಗೆ ಬಡ್ಡಿಯ ಆಮೀಷ ತೋರಿಸಿದ ಖತರ್ನಾಕ್ ಜೋಡಿಯೊಂದು ನಂತರ ಬರೋಬ್ಬರಿ 20 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೋಮಶೇಖರ್ ಹಾಗೂ ಪೂಜಾ ಬರೋಬ್ಬರಿ 40 ಮಹಿಳೆಯರಿಗೆ 20 ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಚಿನ್ನವನ್ನು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣಾ ಪೊಲೀಸರು, ಪೂಜಾ ಹಾಗೂ ಸೋಮಶೇಖರ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಶೇಖರ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಬ್ಯಾಂಕ್ ನೌಕರನೆಂದು ಹೇಳಿ ವಂಚಿಸಿದ್ದಾನೆ.

ಆರೋಪಿ ಸೋಮಶೇಖರ್ ಈ ಮೊದಲು ಫೆಡ್ ಬ್ಯಾಂಕ್ ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಹಾಗೆಯೆ ಮತ್ತೋರ್ವ ಆರೋಪಿ ಪೂಜಾ ಮಂಡ್ಯದ ದೊಡ್ಡ ವರ್ತಕರ ಸೊಸೆ ಎಂದು ವರದಿಯಾಗಿದೆ. ಪೂಜಾಳಿಗೆ ಪತಿ ಇಲ್ಲ, ಸೋಮಶೇಖರ್ ಗೆ ಪತ್ನಿ ಇಲ್ಲ. ಇಬ್ಬರು ಸ್ನೇಹಿತರು ಎಂದು ಹೇಳಿಕೊಂಡು ಅಧಿಕ ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಚಿನ್ನ ಪಡೆದು ವಂಚಿಸಿದ್ದಾರೆ.

ಆರೋಪಿ ಸೋಮಶೇಖರ್ ನಮ್ಮ ಬ್ಯಾಂಕ್​ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ 20%, ತಿಂಗಳಿಗೆ 40% ಬಡ್ಡಿ ಸಿಗುತ್ತೆ ಎಂದು ಆಮಿಷವೊಡ್ಡುತ್ತಿದ್ದ. ಹೆಚ್ಚಾಗಿ ಮಹಿಳೆಯರು ಮತ್ತು ಮಂಗಳಮುಖಿಯರನ್ನೇ ಟಾರ್ಗೆಟ್ ಮಾಡ್ತಿದ್ದ. ಹೆಚ್ಚಿನ ಬಡ್ಡಿ ಸಿಗುತ್ತೆ ಎಂಬ ಆಮಿಷಕ್ಕೆ ಒಳಗಾಗಿ ಗ್ರಾಹಕರು ಚಿನ್ನ ಕಳೆದುಕೊಂಡಿದ್ದಾರೆ. ಸತ್ಯ ತಿಳಿಯುತ್ತಿದ್ದಂತೆ ಮಂಗಳಮುಖಿಯೊಬ್ಬರು ಮಂಡ್ಯ ಠಾಣೆಯಲ್ಲಿ ದೂರು ದಾಖಲಿಸಿದ್ರು. ತನಿಖೆ ಶುರು ಮಾಡಿದ ಪೊಲೀಸರಿಂದ ಸುಮಾರು 20 ಕೋಟಿ ವಂಚನೆ ಪ್ರಕರಣ ಬಯಲಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

- Advertisement -
spot_img

Latest News

error: Content is protected !!