Thursday, June 4, 2026
Homeತಾಜಾ ಸುದ್ದಿಕಟ್ಟಡದಲ್ಲಿ ಬೆಂಕಿ; 10 ಜನರ ರಕ್ಷಣೆಗೆ ಕಾರ್ಯಾಚರಣೆ

ಕಟ್ಟಡದಲ್ಲಿ ಬೆಂಕಿ; 10 ಜನರ ರಕ್ಷಣೆಗೆ ಕಾರ್ಯಾಚರಣೆ

- Advertisement -
- Advertisement -

ಬೆಂಗಳೂರು: ಆರ್‌.ಟಿ. ನಗರದಲ್ಲಿರುವ ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 10 ಜನರು ಕಟ್ಟಡದೊಳಗೆ ಸಿಲುಕಿದ್ದು, ಜನರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆರ್‌.ಟಿ. ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್‌ ಕಟ್ಟಡದಲ್ಲಿ ಹಲವು ಕಚೇರಿಗಳಿದ್ದು, 30ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಟ್ಟಡದ ಮಹಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಹೊಗೆ ದಟ್ಟವಾಗಿ ಆವರಿಸಿತ್ತು.

ಬೆಂಕಿ ಕಂಡಿದ್ದ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು, ಬೆಂಕಿ ನಂದಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಕಟ್ಟಡದ ಒಳಗಿನ ಕಚೇರಿಯೊಂದರಲ್ಲಿ 10 ಜನ ಸಿಲುಕಿರುವ ಮಾಹಿತಿ ಇದೆ. ಅವರನ್ನು ಹೊರಗೆ ತರಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.

- Advertisement -

Latest News

error: Content is protected !!