Sunday, June 7, 2026
Homeತಾಜಾ ಸುದ್ದಿಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ; ಎಸ್ ಐ ಆಗಿ ತಂದೆಯಿಂದಲೇ ಅಧಿಕಾರ...

ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ; ಎಸ್ ಐ ಆಗಿ ತಂದೆಯಿಂದಲೇ ಅಧಿಕಾರ ಸ್ವೀಕರಿಸಿದ ಮಗಳು

- Advertisement -
- Advertisement -

ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆ ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಅಪ್ಪನಿಂದಲೇ ಮಗಳು ಪೋಲಿಸ್‌ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿರುವ ಅಪರೂಪದ ಘಟನೆ ನೆಡದಿದೆ.  ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿ‌.ಎಸ್.ವೆಂಕಟೇಶ್ ಎನ್ನುವವರು ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾ. ಅವರ ಮಗಳು ಬಿ.ವಿ.ವರ್ಷಾ ಅವರು ನೂತನ ಎಸ್‌ಐ ಆಗಿ ಬಂದಿದ್ದಾರೆ.

ಹೀಗಾಗಿ  ಬಿ.ವಿ.ವರ್ಷಾಅವರು ತಮ್ಮ ತಂದೆಯಿಂದಲೇ ಅಧಿಕಾರ ಸ್ವೀಕರಿಸಿದರು. ಇದೊಂದು ಅತ್ಯಂತ ಅಪರೂಪದ ಕ್ಷಣ. ಅಂದ್ಹಾಗೆ 2022ರ ಬ್ಯಾಚ್‌ನಲ್ಲಿ ಪಿಎಸ್‌ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಈಗ ಮಂಡ್ಯಕ್ಕೆ ಬಂದು ಸೆಂಟ್ರಲ್ ಠಾಣೆ ಎಸ್‌ ಐ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

- Advertisement -

Latest News

error: Content is protected !!