- Advertisement -
- Advertisement -
ಮಂಜೇಶ್ವರ; ಸಮುದ್ರಕ್ಕೆ ಹಾರಿ ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಜೇಶ್ವರ ಕುಂಡುಕೊಳಕೆ ಸಮುದ್ರ ತೀರದಲ್ಲಿ ನಡೆದಿದೆ.
ದಂಪತಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈಯಲು ಪ್ರಯತ್ನ ಪಟ್ಟ ಘಟನೆ ನಡೆದಿದ್ದು, ಪತ್ನಿಯನ್ನು ಸ್ಥಳೀಯರು ಉಳಿಸಿದರೆ, ಪತಿ ಸಾವಿಗೀಡಾಗಿದ್ದಾರೆ. ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂಬಾರು ನೀರೋಲ್ಪೆ ನಿವಾಸಿ, ಹೊಸಂಗಡಿ ಎಸ್ ಎ ಟೈಲರ್ ಮಾಲೀಕ ಭಾಸ್ಕರ್ ನೀರೋಲ್ಪೆ (60) ಮೃತರು.
ಫೆಬ್ರವರಿ 22 ರಂದು ಶನಿವಾರ ಸಂಜೆ ನಡೆದಿದೆ. ಪೊಲೀಸರು ಭಾನುವಾರ ಬೆಳಗ್ಗಿನ ಸಮಯದಿಂದಲೇ ಹುಡುಕಾಟ ಮಾಡಲು ಪ್ರಾರಂಭ ಮಾಡಿದ್ದು, ಭಾಸ್ಕರ್ ಅವರ ಶವ ಅಪರಾಹ್ನ 3 ಗಂಟೆ ಸಮಯದಲ್ಲಿ ಉಪ್ಪಳ ಮುಸೋಡಿ ಅಧಿಕದ ಸಮುದ್ರದಲ್ಲಿ ಪತ್ತೆಯಾಗಿದೆ.
- Advertisement -