Sunday, May 19, 2024
Homeಕರಾವಳಿಉಡುಪಿಉಡುಪಿ: ಪೆರ್ಣಂಕಿಲ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಚಿರತೆ ಸೆರೆ!

ಉಡುಪಿ: ಪೆರ್ಣಂಕಿಲ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಚಿರತೆ ಸೆರೆ!

spot_img
- Advertisement -
- Advertisement -

ಉಡುಪಿ: ಉಡುಪಿಯ ಪೆರ್ಣಂಕಿಲ ಗ್ರಾಮಸ್ಥರಲ್ಲಿ ಕಳೆದ ಒಂದು ತಿಂಗಳಿಂದ ಆತಂಕ ಹುಟ್ಟಿಸಿ ಭಯಕ್ಕೆ ಕಾರಣವಾದ ಚಿರತೆಯು ಜು.22ರ ರಾತ್ರಿ ವೇಳೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

ಪೆರ್ಣಂಕಿಲ ಭಾಗದಲ್ಲಿ ಚಿರತೆಗಳ ಓಡಾಟದ ಬಗ್ಗೆ ಈ ಹಿಂದೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುಂಡುಪಾದೆಯ ಆಶೋಕ್ ನಾಯಕ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಅರಣ್ಯ ಇಲಾಖೆಯಿಂದ ಚಿರತೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ.

ಬೋನಿಗೆ ಬಿದ್ದ 7 ವರ್ಷ ಪ್ರಾಯದ ಗಂಡು ಚಿರತೆಯನ್ನು ಅರಣ್ಯ ಇಲಾಖೆಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಶುಕ್ರವಾರ ಅಭಯಾರಣ್ಯಕ್ಕೆ ಬಿಡಲಾಗಿದೆ

ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಡುಪಿ ಉಪವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ, ಹಿರಿಯಡ್ಕ ಉಪವಲಯ ಅರಣ್ಯಾಧಿಕಾರಿ ಜಯ ರಾಮ ಪೂಜಾರಿ, ಅರಣ್ಯ ರಕ್ಷಕರಾದ ದೇವರಾಜ ಪಾಣ, ಜಯರಾಮ ಶೆಟ್ಟಿ, ಕೇಶವ ಪೂಜಾರಿ, ಸುನೀತ್ ಬಾಬು ಹಾಗೂ ಚಾಲಕ ಜಾಯ್ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!