Sunday, June 7, 2026
Homeಕರಾವಳಿಬೆಳ್ತಂಗಡಿ: ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧನಕ್ಕೆ ಶ್ರೀ ಗುರುನಾರಾಯಣ ಸ್ವಾಮಿ...

ಬೆಳ್ತಂಗಡಿ: ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧನಕ್ಕೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಆಗ್ರಹ

- Advertisement -
- Advertisement -

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದಲ್ಲಿ ಕಳೆದ ಸುಮಾರು ಎರಡು ತಿಂಗಳ ಹಿಂದೆ ಟಿವಿ ನೋಡಲು ಬಂದಿದ್ದ 7ನೇ ತರಗತಿಯ ಆಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿರುವ ಪ್ರಕರಣ ಕುರಿತು ಸೂಕ್ತ ತನಿಖಾ ವರದಿ ಹಾಗೂ ಮುಖ್ಯ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಪೊಲೀಸ್‌ ವೃತ್ತ ನಿರೀಕ್ಷಕರ ಬಳಿ ಮನವಿ ಸಲ್ಲಿಸಿದೆ.

ತನಿಖೆಯ ಸೂಕ್ತ ವರದಿ ಹಾಗೂ ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸುಧೀರ್ ಎನ್ನುವವನನ್ನು ಇಲ್ಲಿಯವರೆಗೂ ಬಂಧಿಸದಿರಲು ಸೂಕ್ತ ಕಾರಣ ತಿಳಿಸುವಂತೆ ಆಗ್ರಹಿಸಿದೆ. ಮತ್ತು ಈ ಪ್ರಕರಣದಲ್ಲಿ ಶಾಮೀಲಾದ ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕು ಆಗ್ರಹಿಸಲಾಗಿದೆ.

ಹಾಗೇ ಇಂದಬೆಟ್ಟು ವ್ಯಾಪ್ತಿಯಲ್ಲಿ ನಡೆದ 6 ವರ್ಷದ ಮುಗ್ಧ ಕಂದಮ್ಮನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ತನಿಖೆಯ ಪ್ರಗತಿಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವಂತೆಯೂ ಹಾಗೂ ಈ ಎರಡು ಪ್ರಕರಣಗಳಲ್ಲಿ ಸದ್ರಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದಕ್ಕೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಸಂಘಟನೆಯು ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.

- Advertisement -

Latest News

error: Content is protected !!