Saturday, June 6, 2026
Homeಕರಾವಳಿಉಳ್ಳಾಲ: ಸಮುದ್ರ ಮಧ್ಯೆ ಮುಗುಚಿ ಬಿದ್ದ ಮೀನುಗಾರಿಕಾ ಬೋಟ್;ಓರ್ವ ನಾಪತ್ತೆ!

ಉಳ್ಳಾಲ: ಸಮುದ್ರ ಮಧ್ಯೆ ಮುಗುಚಿ ಬಿದ್ದ ಮೀನುಗಾರಿಕಾ ಬೋಟ್;ಓರ್ವ ನಾಪತ್ತೆ!

- Advertisement -
- Advertisement -

ಮಂಗಳೂರು: ಸಮುದ್ರ ಮಧ್ಯೆ ಆಳಸಮುದ್ರ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಒಂದು ಮಗುಚಿ ಬಿದ್ದ ಘಟನೆ ಉಳ್ಳಾಲದಲ್ಲಿ ನಡೆದಿದೆ.

12 ಜನ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಟ್ ಒಂದು ಸಮುದ್ರ ಮಧ್ಯೆ ನಾಲ್ಕು ವರ್ಷಗಳ ಹಿಂದೆ ಮುಳುಗಿರುವ ಹಡಗಿಗೆ ಡಿಕ್ಕಿಯಾಗಿ ಬೋಟ್ ಮಗುಚಿ ಬಿದ್ದಿದೆ ಎನ್ನಲಾಗುತ್ತಿದೆ. ಕೂಡಲೇ ಅವರನ್ನು ಹಿಂದಿನಲ್ಲಿದ್ದ ಬೋಟಿನವರು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಹನ್ನೊಂದು ಮಂದಿ ಈಜುತ್ತಾ ಬಂದು ಇನ್ನೊಂದು ಬೋಟಿನ ಮೂಲಕ ಜೀವ ಉಳಿಸಿಕೊಂಡಿದ್ದು ಒಬ್ಬ ನೀರಿನಲ್ಲಿ ಕಾಣೆಯಾಗಿದ್ದಾನೆ.

ಕಾಣೆಯಾದವನು ತಮಿಳುನಾಡು ಮೂಲದವನು ಎಂದು ಹೇಳಲಾಗುತ್ತಿದೆ. ಉಳ್ಳಾಲ ಮೊಗವೀರಪಟ್ಟದ ಭಾನುಪ್ರಕಾಶ್ ಎಂಬವರ ಮಾಲೀಕತ್ವದ ಆದ್ಯ ಹೆಸರಿನ ಬೋಟ್ ಇದಾಗಿದೆ.ಮುಳುಗಿದ್ದ ಬಾರ್ಜ್ ಹಡಗನ್ನು ತೆರವುಗೊಳಿಸಿಲ್ಲ ಹಾಗೂ ಹಡಗು ಇರುವ ಬಗ್ಗೆ ಯಾವುದೇ ಗುರುತನ್ನೂ ಹಾಕಿಲ್ಲ,ಇದರಿಂದಾಗಿ ಮೀನುಗಾರಿಕಾ ಬೋಟ್ ಗಳಿಗೆ ಇದು ಅಪಾಯಕಾರಿಯಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

- Advertisement -

Latest News

error: Content is protected !!