Wednesday, July 2, 2025
Homeತಾಜಾ ಸುದ್ದಿಟ್ರಾಕ್ಟರ್ ಚಾಲಕನ ತಪ್ಪಿಗೆ ಹಾರಿ ಹೋಯ್ತು ಅಮಾಯಕನ ಪ್ರಾಣ

ಟ್ರಾಕ್ಟರ್ ಚಾಲಕನ ತಪ್ಪಿಗೆ ಹಾರಿ ಹೋಯ್ತು ಅಮಾಯಕನ ಪ್ರಾಣ

spot_img
- Advertisement -
- Advertisement -

ಚಿಕ್ಕಮಗಳೂರು: ಮಧ್ಯ ರಸ್ತೆಯಲ್ಲಿ ನಿಲ್ಲಿಸಿದ ಟ್ರಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪ ಕೆ ಎಸ್  ಆರ್ ಟಿಸಿ ಬಸ್ ಡಿಪೋ ಹತ್ತಿರ ನಡೆದಿದೆ.

ಬೈಕ್ ಸವಾರ ರಕ್ಷಿತ್ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಣಕಲ್ ಕಡೆಯಿಂದ ಗೋಣಿಬೀಡು ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ರಕ್ಷಿತ್‌ ಗೋಣಿಬೀಡ್ ಸಮೀಪದ  ಲಕ್ಷ್ಮೀಪುರದ  ರಾಮುರವರ ಪುತ್ರ ಎಂದು ತಿಳಿದುಬಂದಿದೆ. ಮಗನನ್ನ ಕಳೆದುಕೊಂಡ  ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.

ಮೂಡಿಗೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -
spot_img

Latest News

error: Content is protected !!