ಬಂಟ್ವಾಳ : ತಾಲೂಕಿನಲ್ಲಿ ಶುಕ್ರವಾರ ನಡೆದ ಶಾಲಾಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜನಾಕ್ರೋಶಭುಗಿಲೆದ್ದ ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ಪೊಲೀಸರು ಆರೋಪಿಗಳಾದ ಕಾಪು ನಿವಾಸಿ ಕೆಎಸ್ ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್, ಹಾಗೂ ಇದಾಯತ್ತುಲ್ಲ ಅವರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ರಾಪ್ತಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ಸೊನಾವಣೆ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಪ್ರವೃತ್ತರಾಗಿ ಆರೋಪಿಗಳಜಾಡನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ.ಅಪ್ರಾಪ್ತ ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರು ನಾಲ್ವರು ಆರೋಪಿಗಳಾದ ಪಡುಬಿದ್ರೆ ಕಾಪು ನಿವಾಸಿ ಕೆ.ಎಸ್.ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತುಲ್ಲಾ ರನ್ನು ಬಂಧಿಸಿದ್ದಾರೆ.
ಆದರೆ ಇದೀಗ ಪ್ರಕರಣವು ಹೊಸ ತಿರುವೊಂದನ್ನ ಪಡೆದುಕೊಂಡಿದೆ . ಶರತ್ ಶೆಟ್ಟಿ ಎಂಬಾತ ಅಪ್ರಾಪ್ತ ಬಾಲಕಿಗೆ ಫೇಸ್ಬುಕ್ ನಲ್ಲಿ ಪರಿಚಯ ಆಗಿದ್ದು, ಆನಂತರ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಮಾತನಾಡಿಕೊಂಡು ಸಂಪರ್ಕದಲ್ಲಿದ್ದರು. ಈ ವೇಳೆ, ಶರತ್ ಶೆಟ್ಟಿ ತನ್ನ ಸಂಬಂಧಿ ಯುವಕನಾದ ಮಾರುತಿ ಮಂಜುನಾಥ್ ಎಂಬಾತನಿಗೂ ಬಾಲಕಿಯನ್ನು ಪರಿಚಯ ಮಾಡಿಸಿದ್ದು, ಆತನೂ ಸಲುಗೆ ಬೆಳೆಸಿಕೊಂಡಿದ್ದ. ಅಲ್ಲದೆ, ಬಾಲಕಿಯ ಜೊತೆ ವಾಟ್ಸಾಪ್ ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸಿ ಚಾಟ್ ಮಾಡುತ್ತಿದ್ದ.
ಈ ನಡುವೆ, ಅ.8ರಂದು ಬಾಲಕಿಯನ್ನು ಮಂಗಳೂರಿಗೆ ಬರುವಂತೆ ಶರತ್ ಶೆಟ್ಟಿ ತಿಳಿಸಿದ್ದು, ಅದರಂತೆ ಬಸ್ಸಿನಲ್ಲಿ ಬಂದಿದ್ದ ಬಾಲಕಿಯನ್ನು ಮಂಗಳೂರಿನ ಸಿಟಿ ಮಹಲ್ ಲಾಡ್ಜ್ ಬಳಿ ಭೇಟಿಯಾಗಿದ್ದಾನೆ. ಆನಂತರ, ಲಾಡ್ಜ್ ಗೆ ಹೋಗಿ ವಿಶ್ರಾಂತಿ ಮಾಡೋಣ ಎಂದು ಪುಸಲಾಯಿಸಿದ್ದು ಲಾಡ್ಜ್ ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆನಂತರ, ತನ್ನ ಸ್ನೇಹಿತ ಇದಾಯತುಲ್ಲಾ ಎಂಬಾತನನ್ನು ಕರೆದಿದ್ದು, ಒಂದು ಹುಡುಗಿ ಇದೆ ಎಂದು ಹೇಳಿ ಬರಹೇಳಿದ್ದಾನೆ. ಇದಾಯತುಲ್ಲಾ ಕೂಡ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದ. ಇವರಿಗೆ ಲಾಡ್ಜ್ ವ್ಯವಸ್ಥೆಯನ್ನು ಶರತ್ ಶೆಟ್ಟಿ ಸ್ನೇಹಿತ ಸತೀಶ್ ಎಂಬಾತ ಮಾಡಿದ್ದು, ಅಲ್ಲದೆ, ಲಾಡ್ಜ್ ನಲ್ಲಿ ಹುಡುಗಿಯ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದ. ಆನಂತರ ಬಾಲಕಿ ಬಸ್ಸಿನ ಮೂಲಕ ಬಂಟ್ವಾಳಕ್ಕೆ ಬಂದಿದ್ದಳು.
ಬಾಲಕಿ ಅಪ್ರಾಪ್ತಳಾಗಿದ್ದರಿಂದ ಪ್ರಕರಣ ಸಂಬಂಧಿಸಿ ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಲೈಂಗಿಕ ಶೋಷಣೆ ಮತ್ತು ಬೆದರಿಕೆ ವಿಚಾರದಲ್ಲಿ ಕಲಂ 366 ಎ, 376ಡಿ ಮತ್ತು 506 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಶಾಲೆಗೆ ತೆರಳಿದ್ದ ಬಾಲಕಿಯನ್ನು ತಂಡವೊಂದು ಅಪಹರಿಸಿ, ಅಮ್ಟಾಡಿ ಎಂಬಲ್ಲಿಗೆ ಕರೆದೊಯ್ದು ಮತ್ತು ಬರಿಸುವ ಜ್ಯೂಸ್ ಕೊಟ್ಟು ಅತ್ಯಾಚಾರ ಎಸಗಿದ್ದಾಗಿ ಹೇಳಲಾಗಿತ್ತು. ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ನೈಜ ವಿಚಾರ ಹೊರಬಿದ್ದಿದೆ. ಅಲ್ಲದೆ, ಪ್ರಕರಣದಲ್ಲಿ ಬಾಲಕಿಯೇ ಯುವಕರ ಜೊತೆ ಸಲುಗೆಯಿಂದ ವರ್ತಿಸಿದ್ದು ಮತ್ತು ಫೇಸ್ಬುಕ್ ಜಾಲವನ್ನು ದುರುಪಯೋಗ ಮಾಡಿಕೊಂಡಿದ್ದು ಕಂಡುಬಂದಿದೆ.