Wednesday, July 15, 2026
Homeಕರಾವಳಿಉಡುಪಿಬ್ರಹ್ಮಾವರ: ಆಟವಾಡ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಸಾವು

ಬ್ರಹ್ಮಾವರ: ಆಟವಾಡ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಸಾವು

- Advertisement -
- Advertisement -

ಬ್ರಹ್ಮಾವರ: ಆಟವಾಡಲೆಂದು ತೆರಳಿದ್ದ 5 ವರ್ಷದ ಮಗು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ತೆಂಕಬೆಟ್ಟುವಿನಲ್ಲಿ ನಡೆದಿದೆ..

ಲಾರೆನ್ ಲೂವಿಸ್ ಮೃತಪಟ್ಟ ಬಾಲಕ. ಈತ ಉಪ್ಪೂರು ನಿವಾಸಿ ನೋರ್ಮನ್ ಮತ್ತು ಸಿಲ್ವಿಯ ಎಂಬುವರ ಪುತ್ರ. ಇವರು ಕುವೈಟ್ ನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು. ಮಗು ,ಮನೆಯ ಪಕ್ಕ ಆಟವಾಡುತ್ತಿದ್ದಾಗ ಅಕಸ್ಮಾತ್ತಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದೆ. ಬ್ರಹ್ಮಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!