Saturday, June 6, 2026
HomeUncategorizedಸುಳ್ಯ:ಇನೋವಾ ಕಾರು ಹಾಗೂ ಬೈಕ್ ನಡುವೆ ಅಪಘಾತ; ಹಿಂಬದಿ ಸವಾರ ಸಾವು

ಸುಳ್ಯ:ಇನೋವಾ ಕಾರು ಹಾಗೂ ಬೈಕ್ ನಡುವೆ ಅಪಘಾತ; ಹಿಂಬದಿ ಸವಾರ ಸಾವು

- Advertisement -
- Advertisement -

ಸುಳ್ಯ: ಇನೋವಾ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಸುಳ್ಯದ ಮಂಡೆಕೋಲು ಗ್ರಾಮದ ಮುರೂರು ಎಂಬಲ್ಲಿ ನಡೆದಿದೆ. ದೇಲಂಪಾಡಿ ಮೈಯಾಳ ನಿವಾಸಿ ಕೃಷ್ಣ  (75) ಮೃತ ದುರ್ದೈವಿ.

ಕೃಷ್ಣಯವರು ಹಾಗೂ ಅವರ ಪುತ್ರ ಪದ್ಮನಾಭ ಎಂಬವರು ಬೈಕ್ ನಲ್ಲಿ ಸುಳ್ಯ ಹಳೆಗೇಟಿನಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದರು.  ಮಧ್ಯಾಹ್ನ ಸುಳ್ಯದಿಂದ ದೇಲಂಪಾಡಿಯ ಮನೆಗೆ ವಾಪಾಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!