Friday, June 5, 2026
Homeಕರಾವಳಿಕಾಸರಗೋಡಿನಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

ಕಾಸರಗೋಡಿನಲ್ಲಿ ಪಯಸ್ವಿನಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

- Advertisement -
- Advertisement -

ಕಾಸರಗೋಡು;ಹೊಳೆಗೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಕಾಸರಗೋಡಿನ ಆಲೂರು ಎಂಬಲ್ಲಿ  ಪಯಸ್ವಿನಿ ನದಿಯಲ್ಲಿ ನಡೆದಿದೆ. ತಿರುವನಂತಪುರದ ರಂಜು (24) ಮತ್ತು ಕೊಲ್ಲಂನ ವಿಜಿತ್(23) ನೀರುಪಾಲಾದ ಯುವಕರು.

ಇವರು ಸ್ನೇಹಿತರ ಜೊತೆ ನದಿಯಲ್ಲಿ ಈಜುತ್ತಿದ್ದಾಗ ಅವಘಡ ಸಂಭವಿಸಿದೆ. ಅಗ್ನಿ ಶಾಮಕ ದಳ,ಪೊಲೀಸರು ಹಾಗೂ ನಾಗರಿಕರು ಶೋಧ ನಡೆಸಿ ನಿನ್ನೆ ರಾತ್ರಿ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ಖಾಸಗಿ ಕಂಪೆನಿಯಲ್ಲಿ ದುಡಿಯುತ್ತಿದ್ದ ಇಬ್ಬರೂ ಇದೇ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮುನಂಬ್ ನ ಸಹದ್ಯೋಗಿ ವಿಷ್ಣು ಅವರ ಮನೆಗೆ ಬಂದಿದ್ದರು.ಸೆ.25ರಂದು ಸ್ನೇಹಿತರ ಜೊತೆ ಗೋವಾಕ್ಕೆ ತೆರಳಿ ಬುಧವಾರ ರಾಣಿಪುರಕ್ಕೆ ಆಗಮಿಸಿದ್ದು, ಸಂಜೆ ಮೂರು ಗಂಟೆಗೆ ಮುನಂಬ್ ನಲ್ಲಿರುವ ವಿಷ್ಣುವಿನ ಮನೆಗೆ ಬಂದಿದ್ದರು. ರಾತ್ರಿ ಇವರು ರೈಲಿನಲ್ಲಿ ಊರಿಗೆ ಮರಳುವವರಿದ್ದರು.

ಸಂಜೆ ನಾಲ್ಕು ಗಂಟೆಗೆ ಇವರು ಮುನಂಬ್ ನಲ್ಲಿರುವ ತೂಗು ಸೇತುವೆ ಬಳಿಗೆ ತೆರಳಿದ್ದರು.ಬಳಿಕ ವಿಜಿತ್, ರಂಜು ಸೇರಿದಂತೆ ನಾಲ್ವರು ಹೊಳೆಗೆ ಇಳಿದಿದ್ದರು .ಈ ಸಂದರ್ಭದಲ್ಲಿ ಇಬ್ಬರು ನೀರುಪಾಲಾಗಿದ್ದರು.

- Advertisement -

Latest News

error: Content is protected !!