Thursday, June 4, 2026
Homeಕರಾವಳಿಉಡುಪಿಉಡುಪಿ: ನದಿ ಸಮೀಪ ಬೈಕ್ ನಿಲ್ಲಿಸಿ ಯುವಕ ನಾಪತ್ತೆ!

ಉಡುಪಿ: ನದಿ ಸಮೀಪ ಬೈಕ್ ನಿಲ್ಲಿಸಿ ಯುವಕ ನಾಪತ್ತೆ!

- Advertisement -
- Advertisement -

ಉಡುಪಿ: ಸೇತುವೆ ಬಳಿ ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದು, ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಪಡುಕರೆ ಸಮೀಪದ ಪಾಪನಾಶಿನಿ‌ ನದಿಯ ಸಮೀಪ ಬೈಕ್ ನಿಲ್ಲಿಸಿ ಯುವಕ ನಾಪತ್ತೆಯಾಗಿದ್ದಾನೆ. ದಾವಣಗೆರೆ ಮೂಲದ ಶಿವ ಎಂಬ ಯುವಕ ನಾಪತ್ತೆಯಾಗಿದ್ದು, ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.

ಯುವಕನಿಗಾಗಿ ನದಿಯಲ್ಲಿ ಸ್ಥಳೀಯ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆದಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!