Thursday, June 4, 2026
Homeಕರಾವಳಿಸುಳ್ಯ; ಸೋಣಂಗೇರಿಯಲ್ಲಿ ಬಸ್ ನಿಂದ ಇಳಿಯುವಾಗ ಮಹಿಳೆ ಗಾಯಗೊಂಡ ಪ್ರಕರಣ: ಬಸ್ ಚಾಲಕನ ವಿರುದ್ಧ ದೂರು...

ಸುಳ್ಯ; ಸೋಣಂಗೇರಿಯಲ್ಲಿ ಬಸ್ ನಿಂದ ಇಳಿಯುವಾಗ ಮಹಿಳೆ ಗಾಯಗೊಂಡ ಪ್ರಕರಣ: ಬಸ್ ಚಾಲಕನ ವಿರುದ್ಧ ದೂರು ದಾಖಲಿಸಿದ ಗಾಯಾಳುವಿನ ಸಂಬಂಧಿ

- Advertisement -
- Advertisement -

ಸುಳ್ಯ:  ಸೋಣಂಗೇರಿ ಬಳಿ  ಬಸ್ ನಿಲ್ಲುವ ಮೊದಲೇ ಮಹಿಳೆಯೊಬ್ಬರು ಇಳಿದು  ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಂಬಂಧಿ ದೂರು ದಾಖಲಿಸಿದ್ದಾರೆ.  ಬಸ್  ಚಾಲಕನ  ಅಜಾಗರೂಕತೆಯೇ ಘಟನೆಗೆ ಕಾರಣವೆಂದು ಆರೋಪಿಸಿ ಮಹಿಳೆಯ ಸಂಬಂಧಿ ಸುಳ್ಯ ಪೊಲೀಸ್ ಠಾಣೆಗೆ ಸೆ.20ರಂದು ದೂರು ನೀಡಿದ್ದಾರೆ.

ಮಹಿಳೆಯ ಸಂಬಂಧಿ ಹಸೈನಾರ್ ಎಂಬವರು ದೂರು ನೀಡಿದ್ದು  ಪೂರ್ವಾಹ್ನ  ಸುಮಾರು 11:55 ಕ್ಕೆ ಕೆಲಸದ ನಿಮಿತ್ತ ಸೋಣಂಗೇರಿಯಲ್ಲಿ ನಿಂತಿದ್ದ ಸಂದರ್ಭ ಬೆಳ್ಳಾರೆ ಕಡೆಯಿಂದ ಬಂದ ಕೆ ಎಸ್ ಆರ್ ಟಿ ಸಿ ಬಸ್ಸು ಸೋಣಂಗೇರಿ ಜಂಕ್ಷನ್ ಬಳಿ ಬಂದು ನಿಂತಿತ್ತು.  ಅದರಿಂದ ಓರ್ವ ಮಹಿಳೆ ಇಳಿಯುತ್ತಿದ್ದ ಸಂದರ್ಭ ಬಸ್ಸಿನ ಚಾಲಕ ನಿರ್ಲಕ್ಷತನದಿಂದ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ಬಸ್ಸನ್ನು ಚಲಾಯಿಸಿದರ  ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂಬದಿ ಚಕ್ರ ಅವರ ಬಲಕಾಲಿನ ಮೇಲೆ ಹತ್ತಿರುತ್ತದೆ.

ಕೂಡಲೇ ನಾನು ಮತ್ತು ಸ್ಥಳದಲ್ಲಿದ್ದ ಇತರರು ಓಡಿ ಹೋಗಿ ನೋಡಿದಾಗ ಬಿದ್ದಿರುವ ಮಹಿಳೆ ನನ್ನ ಅಣ್ಣನ ಪತ್ನಿ ಮೈಮುನಾ ಅನ್ನೋದು ಗೊತ್ತಾಗಿದೆ. ಕೂಡಲೇ ನಾನು ಮತ್ತು ಅಲ್ಲಿದ್ದ ಇತರರು ಸೇರಿ ಅವರನ್ನು ಜಿಪಿ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕಳುಹಿಸಿಕೊಟ್ಟೆವು.  ಈ ಅಪಘಾತಕ್ಕೆ ಕೆಎ 19 ಎಫ್ 3022 ನೋಂದಣಿ ಸಂಖ್ಯೆಯ ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ ಕಾರಣವಾಗಿದ್ದು ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!