Saturday, June 6, 2026
Homeತಾಜಾ ಸುದ್ದಿಚುಡಾಯಿಸಿದಾತನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ: 20 ಸೆಕೆಂಡ್ ನಲ್ಲಿ ಯುವಕನಿಗೆ ಬಿತ್ತು 40 ಧರ್ಮದೇಟು

ಚುಡಾಯಿಸಿದಾತನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ: 20 ಸೆಕೆಂಡ್ ನಲ್ಲಿ ಯುವಕನಿಗೆ ಬಿತ್ತು 40 ಧರ್ಮದೇಟು

- Advertisement -
- Advertisement -

ಉತ್ತರಪ್ರದೇಶ: ರಸ್ತೆಯಲ್ಲಿ ಹೋಗುತ್ತಿದ್ದಾಗ ಚುಡಾಯಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದ ಓರೈ ನಗರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಡಿತ ಮತ್ತಿನಲ್ಲಿದ್ದ ವ್ಯಕ್ತಿ ಮಹಿಳೆಯನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ. ಇದರಿಂದ ಚಪ್ಪಲಿಯಿಂದ ಮಹಿಳೆ ರಪರಪನೇ ಬಾರಿಸಿದ್ದಾಳೆ. 

ವಿಡಿಯೋದಲ್ಲಿ ಆರೋಪಿ ಕುಕ್ಕರುಗಾಲಿನಲ್ಲಿ ಕುಳಿತಿದ್ದು, ಮಹಿಳೆ ತನ್ನ ಎರಡು ಕಾಲಿನ ಚಪ್ಪಲಿಯನ್ನು ಎರಡು ಕೈಯಲ್ಲಿ ಹಿಡಿದು ಬಿಟ್ಟುಬಿಡದೇ ಆತನ ಮುಖಕ್ಕೆ ಹೊಡೆದಿದ್ದಾಳೆ. 20 ಸೆಕೆಂಡ್ ಇರುವ ವೀಡಿಯೋದಲ್ಲಿ ಮಹಿಳೆ 40  ಬಾರಿ ಚಪ್ಪಲಿಯಿಂದ ಆತನಿಗೆ ಬಾರಿಸಿರುವುದನ್ನು ಕಾಣಬಹುದಾಗಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ

- Advertisement -

Latest News

error: Content is protected !!