Thursday, May 2, 2024
Homeತಾಜಾ ಸುದ್ದಿಈ ವರ್ಷ ಐದು ಸಾವಿರ ಪೊಲೀಸ್ ಪೇದೆ ನೇಮಕ: ಗೃಹ ಸಚಿವ ಆರಗ ಜ್ಞಾನೇಂದ್ರ

ಈ ವರ್ಷ ಐದು ಸಾವಿರ ಪೊಲೀಸ್ ಪೇದೆ ನೇಮಕ: ಗೃಹ ಸಚಿವ ಆರಗ ಜ್ಞಾನೇಂದ್ರ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಐದು ಸಾವಿರ ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದರು.

ನಾವು ಅಧಿಕಾರ ವಹಿಸಿಕೊಂಡಾಗ 22,000 ಹುದ್ದೆಗಳು ಖಾಲಿ ಇದ್ದವು. ಒಂದು ಕಾಲದಲ್ಲಿ 35 ಸಾವಿರ ಹುದ್ದೆ ಹಾಗೇ ಉಳಿದಿದ್ದವು. 12-09-2020ರಲ್ಲಿ 3500 ಪೊಲೀಸ್ ಪೇದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಾರಿ 1500 ಪೊಲೀಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ. ಒಟ್ಟು 5 ಸಾವಿರ ಹುದ್ದೆಗಳು ಭರ್ತಿಯಾಗಲಿವೆ ಎಂದರು.

- Advertisement -
spot_img

Latest News

error: Content is protected !!