Friday, June 5, 2026
Homeತಾಜಾ ಸುದ್ದಿನಿಖಿಲ್ ಕುಮಾರಸ್ವಾಮಿ ದಾಂಪತ್ಯದಲ್ಲಿ ಬಿರುಕು?: ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಹಸಿಬಿಸಿ ಚರ್ಚೆ

ನಿಖಿಲ್ ಕುಮಾರಸ್ವಾಮಿ ದಾಂಪತ್ಯದಲ್ಲಿ ಬಿರುಕು?: ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಹಸಿಬಿಸಿ ಚರ್ಚೆ

- Advertisement -
- Advertisement -

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತು ಬೆಂಗಳೂರು ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬಂದಿದೆ.

ಸಾಮಾಜಿಕ ಜಾಲ ತಾಣಗಳಲ್ಲಿಯೂ ಈ ಬಗ್ಗೆ ಕೇಳಿಬಂದಿದ್ದು ಇದರ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಲಾಕ್‍ಡೌನ್ ನಡುವೆಯೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಏಪ್ರಿಲ್ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವಿವಾಹ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು.

ಮದುವೆಯ ಮೂಲಕ ರಾಮ ನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಪಟ್ಟಾಭಿಷೇಕ ಮಾಡುವ ಯತ್ನವೂ ನಡೆದಿತ್ತು. ಕೊರೊನಾ ಮಾರಿಯಿಂದಾಗಿ ಸೀಮಿತ ಜನರ ನಡುವೆಯೇ ಬಿಡದಿಯಲ್ಲಿರುವ ಕುಮಾರಸ್ವಾಮಿ ಒಡೆತನದ ಲೇಔಟ್ ನಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆದಿತ್ತು.

- Advertisement -

Latest News

error: Content is protected !!