Saturday, June 6, 2026
Homeಕರಾವಳಿಮಂಗಳೂರು: ಅಕ್ರಮ ಮರಳು ಸಾಗಾಟ; 8 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಮಂಗಳೂರು: ಅಕ್ರಮ ಮರಳು ಸಾಗಾಟ; 8 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಮಂಗಳೂರು: ಉಳ್ಳಾಲದ ತಲಪಾಡಿ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ 8 ವಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮರಳು ಸಾಗಾಟಕ್ಕೆ ಬಳಸಿದ್ದ ಎರಡು ವಾಹನ ಸಹಿತ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೋಟೆಕಾರು ಪ.ಪಂ.: ಮುಖ್ಯಾಧಿಕಾರಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಲಪಾಡಿ ಕಜೆ ನಿವಾಸಿ ರಿಯಾಝ್(26), ಕೆ.ಸಿ.ರೋಡ್‌ ನಿವಾಸಿ ಅಬೂಬಕ್ಕರ್‌(53), ಸೋಮೇಶ್ವರ ಗ್ರಾಮದ ಕುದ್ರು ಹೌಸ್‌ ನಿವಾಸಿ ರಘುನಾಥ್‌ (40), ತಲಪಾಡಿ ಚೆಕ್‌ಪೋಸ್ಟ್‌ ಬಳಿ ನಿವಾಸಿ ರಾಜೇಶ್‌(40), ಕೆ.ಸಿ.ರೋಡ್‌ ಪಂಜಳ ನಿವಾಸಿ ಮುತ್ತಾಲಿಬ್‌(22), ಉತ್ತರಪ್ರದೇಶದ ಅತುಲ್‌ (22), ರಾಮಧಾರಿ (28), ಪಂಕಜ್‌(24)ನ‌ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎರಡು ಪಿಕಪ್‌ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!