Friday, June 5, 2026
Homeಕರಾವಳಿಕಾಸರಗೋಡಿನಲ್ಲಿ ಅನುಮಾನಾಸ್ಪದವಾಗಿ 30 ಲಕ್ಷ ರೂಪಾಯಿ ಸಾಗಿಸುತ್ತಿದ್ದವನ ಬಂಧನ

ಕಾಸರಗೋಡಿನಲ್ಲಿ ಅನುಮಾನಾಸ್ಪದವಾಗಿ 30 ಲಕ್ಷ ರೂಪಾಯಿ ಸಾಗಿಸುತ್ತಿದ್ದವನ ಬಂಧನ

- Advertisement -
- Advertisement -

ಕಾಸರಗೋಡು: ಅನುಮಾನಾಸ್ಪದವಾಗಿ 30 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಕಾಸರಗೋಡಿನಲ್ಲಿ ಬಂಧಿಸಿದ್ದಾರೆ.

ಶರದ್ ದಾಬಾಡೆ (22) ಬಂಧಿತ ಆರೋಪಿ. ಈತ ಯಾವುದೇವ  ದಾಖಲೆಗಳಿಲ್ಲದೆ ಅಪಾರ ಪ್ರಮಾಣದ ಅಷ್ಟೊಂದು ಹಣವನ್ನು  ಸಾಗಿಸಿದ್ದಕ್ಕಾಗಿ ಬಂಧಿಸಲಾಗಿದೆ.ವಶಪಡಿಸಿಕೊಂಡ ನಗದು, ಹವಾಲಾ ಹಣ ಎಂಬ ಶಂಕೆ ವ್ಯಕ್ತವಾಗಿದೆ.

ಆರೋಪಿಯು ಮಂಗಳೂರಿನಿಂದ ಕಾಸರಗೋಡು ಕಡೆಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳುತ್ತಿದ್ದಾಗ ಮಂಜೇಶ್ವರ ಅಬಕಾರಿ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ನಗದನ್ನು ಬಟ್ಟೆಯಲ್ಲಿ ಕಟ್ಟಿರುವುದು ಪತ್ತೆಯಾಗಿದೆ. ಗಿರವಿ ಇಟ್ಟಿದ್ದ ಚಿನ್ನಾಭರಣಗಳನ್ನು ಅಡವಿಡಲು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಆರೋಪಿ ಹೇಳಿದ್ದಾನೆ.

ಈ ನಡುವೆ ದಬಾಡೆಯನ್ನು ಇದೀಗ ಮಂಜೇಶ್ವರದಲ್ಲಿ ಪೊಲೀಸರಿಗೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಹಣದ ಮೂಲವನ್ನು ಪತ್ತೆ ಮಾಡಲಾಗುತ್ತಿದೆ.

- Advertisement -

Latest News

error: Content is protected !!