Wednesday, October 14, 2026
Homeತಾಜಾ ಸುದ್ದಿವಿಶ್ವದ 2ನೇ ಅತೀ ಶ್ರೀಮಂತ ವ್ಯಕ್ತಿಯಾದ ಗೌತಮ್‌ ಅದಾನಿ

ವಿಶ್ವದ 2ನೇ ಅತೀ ಶ್ರೀಮಂತ ವ್ಯಕ್ತಿಯಾದ ಗೌತಮ್‌ ಅದಾನಿ

- Advertisement -
- Advertisement -

ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಈಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ. ಇದು 5.5 ಬಿಲಿಯನ್  ಡಾಲರ್ ಅಥವಾ ಸುಮಾರು ಶೇ 4ರಷ್ಟು ಹೆಚ್ಚಾಗಿದೆ. ಏಷ್ಯಾದ ವ್ಯಕ್ತಿಯೊಬ್ಬರು ಫೋರ್ಬ್ಸ್​​ ಬಿಲಿಯನೇರ್ಸ್ ಪಟ್ಟಿಯಲ್ಲಿ ಮೊದಲ ಮೂವರಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲು.

ಅದಾನಿ ಅವರು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅದಾನಿ ಫೆಬ್ರವರಿಯಲ್ಲಿ ಏಷ್ಯಾದ ಶ್ರೀಮಂತರಾಗಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದರು. ಕಳೆದ ತಿಂಗಳು ಮೈಕ್ರೋಸಾಫ್ಟ್ ಕಾರ್ಪೊರೇಷನ್‌ನ ಬಿಲ್ ಗೇಟ್ಸ್ ಅವರನ್ನು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹಿಂದಿಕ್ಕಿದರು. ಶರವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಅದಾನಿ ಗ್ರೂಪ್‌ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಕಳೆದ ಕೆಲ ತಿಂಗಳ ಹಿಂದೆ 5ಜಿ ತರಂಗಾಂತರ ಸಹ ಖರೀದಿ ಮಾಡಿದ್ದಾರೆ.

- Advertisement -

Latest News

error: Content is protected !!