Tuesday, June 9, 2026
Homeತಾಜಾ ಸುದ್ದಿಕೆರೆಗಳಿದ್ದ ಸ್ಥಳ ನೀರು ಸಂಗ್ರಹಕ್ಕೆ ಮೀಸಲಾಗಬೇಕು: ಬೆಂಗಳೂರು ನೆರೆ ಸ್ಥಿತಿ ಬಗ್ಗೆ ಪೇಜಾವರ ಶ್ರೀ ಪ್ರತಿಕ್ರಿಯೆ

ಕೆರೆಗಳಿದ್ದ ಸ್ಥಳ ನೀರು ಸಂಗ್ರಹಕ್ಕೆ ಮೀಸಲಾಗಬೇಕು: ಬೆಂಗಳೂರು ನೆರೆ ಸ್ಥಿತಿ ಬಗ್ಗೆ ಪೇಜಾವರ ಶ್ರೀ ಪ್ರತಿಕ್ರಿಯೆ

- Advertisement -
- Advertisement -

ಉಡುಪಿ: ಕೆರೆಗಳಿದ್ದ ಸ್ಥಳಗಳನ್ನು ನೀರು ಸಂಗ್ರಹಕ್ಕೆ ಮೀಸಲಿಡಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರಿನಲ್ಲಿನ ನೆರೆ ಪರಿಸ್ಥಿತಿ ಕುರಿತಂತೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಪೇಜಾವರ ಶ್ರೀ, ಪ್ರಕೃತಿಯ ಸಹಜ ವ್ಯವಸ್ಥೆಗಳಿಗೆ ಮನುಷ್ಯ ಯಾವತ್ತೂ ಅಡ್ಡಿ ಮಾಡಬಾರದು ಎಂದು ಹೇಳಿದ್ದಾರೆ. ಅಲ್ಲದೇ ಬೆಂಗಳೂರಿನ ಭೌಗೋಳಿಕ ಪರಿಸರವನ್ನು ಹಾಗೆಯೇ ಉಳಿಸಿಕೊಂಡಿದ್ದರೆ ನೆರೆ ಬರುತ್ತಿರಲಿಲ್ಲ ಎಂದು ಹೇಳಿರುವ ಸ್ವಾಮೀಜಿ, ಮನೆ ಮತ್ತು ಕಟ್ಟಡ ನಿರ್ಮಾಣದ ವೇಳೆ ಭೌಗೋಳಿಕ ಪರಿಸರದ ವಿರುದ್ಧ ಹೋಗಬಾರದು ಎಂದಿದ್ದಾರೆ.

ಬೆಂಗಳೂರು ನೆರೆಯ ಬಗ್ಗೆ ತಜ್ಞರ ವಿಮರ್ಶೆ ನಡೆದು, ಮುಂದೆ ಹೀಗಾಗದಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!