Monday, June 8, 2026
Homeಉತ್ತರ ಕನ್ನಡಕಾರವಾರ; ಬ್ಯಾಂಕ್ ಶಾಖೆಯಲ್ಲಿದ್ದ 2.69 ಕೋಟಿ ರೂ. ಹಣವನ್ನು ಪತ್ನಿ ಖಾತೆಗೆ ವರ್ಗಾಯಿಸಿ ಅಸಿಸ್ಟೆಂಟ್ ಬ್ಯಾಂಕ್...

ಕಾರವಾರ; ಬ್ಯಾಂಕ್ ಶಾಖೆಯಲ್ಲಿದ್ದ 2.69 ಕೋಟಿ ರೂ. ಹಣವನ್ನು ಪತ್ನಿ ಖಾತೆಗೆ ವರ್ಗಾಯಿಸಿ ಅಸಿಸ್ಟೆಂಟ್ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್

- Advertisement -
- Advertisement -

ಉತ್ತರಕನ್ನಡ: ಬ್ಯಾಂಕ್ ಶಾಖೆಯಲ್ಲಿದ್ದ 2.69 ಕೋಟಿ ರೂ. ಹಣವನ್ನು ಪತ್ನಿ ಖಾತೆಗೆ ವರ್ಗಾಯಿಸಿ ಅಸಿಸ್ಟೆಂಟ್ ಬ್ಯಾಂಕ್ ಮ್ಯಾನೇಜರ್ ಎಸ್ಕೇಪ್ ಆಗಿರುವ ಘಟನೆ ಉತ್ತರಕನ್ನಡ ಯಲ್ಲಾಪುರ ತಾಲೂಕಿನ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದೆ.

 ಬರೋಬ್ಬರಿ 2.69 ಕೋಟಿ ರೂಪಾಯಿ ಹಣವನ್ನು ತನ್ನ ಹೆಂಡತಿ ಅಕೌಂಟ್‌ಗೆ ವರ್ಗಾಯಿಸಿರುವ ಅಸಿಸ್ಟಂಟ್ ಬ್ಯಾಂಕ್ ಮ್ಯಾನೇಜರ್ ಇದೀಗ ಎಸ್ಕೇಪ್ ಆಗಿದ್ದಾನೆ. ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎನ್ನುವಾತ ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದ.ಸೇರ್ಪಡೆಗೊಂಡಾಗಿನಿಂದ ಸೆ.5ರವರೆಗೆ ಬ್ಯಾಂಕ್ ನ ಸಿಬ್ಬಂದಿ ಲಾಗಿನ್ ಮೂಲಕ ಕರೆಂಟ್ ಅಕೌಂಟ್ ನಿಂದ ತನ್ನ ಪತ್ನಿಯ ಹೆಸರಿನ ಖಾತೆಗೆ ಆರೋಪಿ ಹಣವನ್ನ ವರ್ಗಾಯಿಸಿಕೊಂಡಿದ್ದಾನೆ.ಈ ಬಗ್ಗೆ ವಾರದ ಬಳಿಕ ಬ್ಯಾಂಕ್ ನ ಇತರ ಅಧಿಕಾರಿಗಳಿಗೆ ಮಾಹಿತಿ ದೊರೆತು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಂಚನೆ ಪ್ರಕರಣ ದಾಖಲಾಗುವ ಕೆಲ ದಿನಗಳ ಹಿಂದೆ ಆರೋಪಿ ಕಾಣೆಯಾಗಿರುವ ಕುರಿತು ಕೂಡ ಪ್ರಕರಣ ದಾಖಲಾಗಿದೆ.ಸದ್ಯ ಆತ ಹಣ ವರ್ಗಾಯಿಸಿರುವ ಖಾತೆಯಲ್ಲಿ ಯಾವುದೇ ಹಣವಿಲ್ಲ.ನಮ್ಮ ತಂಡ ತನಿಖೆ ಮುಂದುವರಿಸಿದ್ದು, ಆರೋಪಿಯ ಬಂಧನದ ಬಳಿಕ ಹಣವನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ

- Advertisement -

Latest News

error: Content is protected !!