Monday, June 8, 2026
Homeತಾಜಾ ಸುದ್ದಿ14 ವರ್ಷದ ಬಾಲಕಿಯನ್ನು ಮದುವೆಯಾದ 45 ವರ್ಷದ ಅಂಕಲ್ : ಮಗಳ ವಯಸ್ಸಿನಾಕೆಯನ್ನು ವಿವಾಹವಾದವನಿಗೆ ಆಯ್ತು...

14 ವರ್ಷದ ಬಾಲಕಿಯನ್ನು ಮದುವೆಯಾದ 45 ವರ್ಷದ ಅಂಕಲ್ : ಮಗಳ ವಯಸ್ಸಿನಾಕೆಯನ್ನು ವಿವಾಹವಾದವನಿಗೆ ಆಯ್ತು ತಕ್ಕ ಶಾಸ್ತಿ

- Advertisement -
- Advertisement -

ಬೆಂಗಳೂರು: ತನ್ನ ಮಗಳ ವಯಸ್ಸಿನ 14 ವರ್ಷದ ಬಾಲಕಿಯನ್ನ ಮದುವೆಯಾದ 45 ವರ್ಷದ ಅಂಕಲ್ ಒಬ್ಬ ಮಾಡಿದ ತಪ್ಪಿಗೆ ಈಗ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾನೆ.14 ವರ್ಷದ ಬಾಲಕಿಯ ಹೆತ್ತವರಿಗೆ ಹಣದಾಸೆ ತೋರಿಸಿ ಆಕೆಯನ್ನು ಮದುವೆಯಾದ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್ (45) ಬಂಧಿತ ಆರೋಪಿ.

ಗುರುಪ್ರಸಾದ್​ಗೆ 18 ವರ್ಷಗಳ ಹಿಂದೆಯೇ ಮದ್ವೆ ಆಗಿದೆ. 17 ವರ್ಷ ವಯಸ್ಸಿನ ಮಗ ಕೂಡ ಇದ್ದಾನೆ. ಕೆಲ ವರ್ಷಗಳಿಂದ ಹೆಂಡತಿಯಿಂದ ದೂರವಾಗಿದ್ದ ಗುರುಪ್ರಸಾದ್​, ಅಪ್ರಾಪ್ತೆ ಮೇಲೆ ಕಣ್ಣು ಹಾಕಿದ್ದ. ಬಾಲಕಿಯ ಪೋಷಕರಿಗೆ ಹಣದಾಸೆ ತೋರಿಸಿ, ಸೆ.7ರಂದು ಬೆಂಗಳೂರು ಹೊರ ವಲಯಕ್ಕೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗಿದ್ದ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದ.

ಈ ಬಗ್ಗೆ ಪರಿಚಯಸ್ಥರ ಬಳಿ ಬಾಲಕಿ ನೋವು ತೋಡಿಕೊಂಡು ಕಣ್ಣೀರಿಟ್ಟದ್ದಳು. ಆಕೆಯ ಕಷ್ಟಕ್ಕೆ ಮರುಗಿದ ಪರಿಚಯಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗುರುಪ್ರಸಾದ್​ ಮತ್ತು ಬಾಲಕಿಯ ತಂದೆ-ತಾಯಿಯನ್ನೂ ಬಂಧಿಸಿದ್ದಾರೆ.

- Advertisement -

Latest News

error: Content is protected !!