Friday, June 5, 2026
Homeಕರಾವಳಿಉಡುಪಿಕರಾವಳಿಯಲ್ಲಿ ನಿಲ್ಲುತ್ತಿಲ್ಲ ಕೊರೊನ ಅಟ್ಟಹಾಸ : ಇಂದು ಉಡುಪಿ 92 ಮತ್ತು ದ.ಕ 4...

ಕರಾವಳಿಯಲ್ಲಿ ನಿಲ್ಲುತ್ತಿಲ್ಲ ಕೊರೊನ ಅಟ್ಟಹಾಸ : ಇಂದು ಉಡುಪಿ 92 ಮತ್ತು ದ.ಕ 4 ಹೊಸ ಪ್ರಕರಣ ಪತ್ತೆ

- Advertisement -
- Advertisement -

ಮಂಗಳೂರು : ದಿನದಿಂದ ದಿನಕ್ಕೆ ಮಾರಕ ಕೊರೊನ ಹಾವಳಿಯು ಕರಾವಳಿಯನ್ನು ಹೈರಾಣಾಗಿಸಿದೆ. ಇಂದು ಉಡುಪಿ ಜಿಲ್ಲೆಯಲ್ಲಿ 92 ಮತ್ತು ದಕ್ಷಿಣ ಕನ್ನಡದಲ್ಲಿ 4 ಹೊಸ ಕೊರೊನ ಸೋಂಕು ಪ್ರಕರಣಗಳು ದಾಖಲಾಗಿವೆ .
ಕರ್ನಾಟಕದಲ್ಲಿ ಇಂದು 257 ಸೋಂಕಿತರು ಪತ್ತೆ ಆಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆ ಆಗಿದೆ.
2651 ಸಕ್ರಿಯ ಪ್ರಕರಣಗಳು ಇದ್ದು 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 106 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 1610 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಉಡುಪಿ ಜಿಲ್ಲೆಯಲ್ಲಿ 92 ,ರಾಯಚೂರು 88, ಬೆಂಗಳೂರು ನಗರ 9, ಮಂಡ್ಯ 15, ಬೆಳಗಾವಿ 12, ಹಾಸನ 15, ದಾವಣಗೆರೆ 13, ಚಿಕ್ಕಬಳ್ಳಾಪುರ 2, ದಕ್ಷಿಣಕನ್ನಡ 4, ವಿಜಯಪುರ, ಮೈಸೂರು, ಬಳ್ಳಾರಿ, ಹಾವೇರಿಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 257 ಪ್ರಕರಣ ದಾಖಲಾಗಿದೆ
ಇವತ್ತು ಪತ್ತೆಯಾದ 257 ಪ್ರಕರಣಗಳಲ್ಲಿ 155 ಅಂತರರಾಜ್ಯ ಪ್ರಯಾಣಿಕರಿದ್ದು ಒಬ್ಬರು ಅಂತರರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.

- Advertisement -

Latest News

error: Content is protected !!